Select Your Language

Notifications

webdunia
webdunia
webdunia
webdunia

ನಿಧಿ ಆಸೆಗಾಗಿ ವ್ಯಕ್ತಿಯ ಹತ್ಯೆ: ಜ್ಯೋತಿಷಿ ಸೇರಿ ಇಬ್ಬರು ಅರೆಸ್ಟ್‌

Human sacrifice for treasure, witchcraft at Chitradurga, astrologer arrested

Sampriya

ಚಿತ್ರದುರ್ಗ , ಮಂಗಳವಾರ, 11 ಫೆಬ್ರವರಿ 2025 (16:52 IST)
ಚಿತ್ರದುರ್ಗ: ನಿಧಿ ಆಸೆಆಗಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪರಶುರಾಂಪುರದಲಿನಡೆದಿದೆ.

ಕೊಲೆಯಾದ ದುರ್ದೈವಿಯನ್ನು ಪ್ರಭಾಕರ್ (52) ಎಂದು ಗುರುತಿಸಲಾಗಿದೆ. ನಿಧಿ ಆಸೆಗಾಗಿ ಪ್ರಭಾಕರ್ ಅವರನ್ನು ಕೊಲೆ ಮಾಡಿದ ಆರೋಪಿಯನ್ನು ಆನಂದ ರೆಡ್ಡಿ ಆಗಿದ್ದಾನೆ.  ಕೊಲೆಯಾದ ವ್ಯಕ್ತಿ ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲೆಯುವ ಕೆಲಸ ಮಾಡುತ್ತಿದ್ದರು.  

ಆನಂದ ರೆಡ್ಡಿಗೆ ಪಾವಗಡದ ಜ್ಯೋತಿಷಿ ರಾಮಕೃಷ್ಣ, ಪಶ್ಚಿಮ ದಿಕ್ಕಿನಲ್ಲಿ ನರಬಲಿ ಕೊಟ್ಟರೆ ಚಿನ್ನ ಸಿಗಲಿದೆ ಎಂದು ಹೇಳಿದ್ದ. ಅದರ ಆಸೆಗೆ ಕೊಲೆ ಮಾಡುವ ಪ್ಲ್ಯಾನ್ ಮಾಡಿದ್ದ.

ಪ್ರಭಾಕರ್‌ಗೆ ಲಿಫ್ಟ್ ಕೊಡುವ ನೆಪದಲ್ಲಿ ಕರೆದೊಯ್ದು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಆರೋಪಿಯ ಬೈಕ್ ಡೀಟೈಲ್ ಪ್ರಕಾರ ಆತನನ್ನು ಪತ್ತೆ ಮಾಡಲಾಗಿದೆ. ಮಚ್ಚು ಹಾಗೂ ಬಟ್ಟೆಯನ್ನು ಪೊಲಿಸರು ಸೀಜ್ ಮಾಡಿದ್ದಾರೆ.

ಸದ್ಯ ಹಂತಕ ಹಾಗೂ ಜ್ಯೋತಿಷಿ ಇಬ್ಬರೂ ಪೊಲೀಸರ ಅತಿಥಿಯಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಸರ್ಕಾರವಿದ್ದಾಗ ಕಠಿಣ ಕ್ರಮ ಕೈಗೊಳ್ತಿದ್ವಿ, ಈ ಸರ್ಕಾರ ಏನೂ ಮಾಡ್ತಿಲ್ಲ: ಬಸವರಾಜ ಬೊಮ್ಮಾಯಿ