Select Your Language

Notifications

webdunia
webdunia
webdunia
webdunia

ಸಿಎಂ ಹುಬ್ಬಳ್ಳಿ ಘಟನೆಯ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದೇ ಇದಕ್ಕೆ ಕಾರಣ: ಉದಯಗಿರಿ ಠಾಣೆಗೆ ಅಶೋಕ್ ಭೇಟಿ

ಸಿಎಂ ಹುಬ್ಬಳ್ಳಿ ಘಟನೆಯ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದೇ ಇದಕ್ಕೆ ಕಾರಣ: ಉದಯಗಿರಿ ಠಾಣೆಗೆ ಅಶೋಕ್ ಭೇಟಿ

Sampriya

ಮೈಸೂರು , ಮಂಗಳವಾರ, 11 ಫೆಬ್ರವರಿ 2025 (16:26 IST)
ಮೈಸೂರು: ಉದಯಗಿರಿಯಲ್ಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ನಡೆದ ಘಟನೆ ಸಂಬಂಧ ಮಾಹಿತಿ ಪಡೆಯಲು ವಿಪಕ್ಷ ನಾಯಕ ಆರ್‌ ಅಶೋಕ್‌ ಅವರು  ಉದಯಗಿರಿ ಠಾಣೆಗೆ ಮಧ್ಯಾಹ್ನ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಘಟನೆಯ ಮಾಹಿತಿ ಪಡೆದರು. 'ಕಲ್ಲು ತೂರಾಟ ನಡೆಸಿದವರನ್ನೂ ಬಂಧಿಸಿ' ಎಂದು ಆಗ್ರಹಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ನಡೆಯಲು ಈ ಹಿಂದೆ ಹುಬ್ಬಳ್ಳಿ ಘಟನೆಯ ಆರೋಪಿಗಳಿಗೆ ಸಿದ್ದರಾಮಯ್ಯ ಕ್ಲೀನ್ ಚಿಟ್ ನೀಡಿದ್ದು ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರ ಮೇಲೆ ಏನೇ ಮಾಡಿದರು ನಡೆಯುತ್ತದೆ ಎಂಬಂತಾಗಿದೆ. ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಪೊಲೀಸರ ಮನೋಸ್ಥೈರ್ಯ ಕುಗ್ಗಿಸುವ ಮಾತುಗಳನ್ನಾಡಿದ್ದಾರೆ ಎಂದು ಆರೋಪ ಮಾಡಿದರು.

ಗೃಹಸಚಿವ ಪರಮೇಶ್ವರ ಅವರಿಗೆ ಒತ್ತಾಯಪೂರ್ವಕವಾಗಿ ಈ ಇಲಾಖೆ ನೀಡಲಾಗಿದೆ. ಹೀಗಾಗಿ ಅವರು ಇಲಾಖೆಯನ್ನು ನಿರ್ವಹಿಸುವಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ. ಸರ್ಕಾರ ಪೊಲೀಸರಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕು. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಸರ್ಕಾರದ ನಡೆ ಇದಕ್ಕೆ ವ್ಯತಿರಿಕ್ತವಾಗಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಮೇಲಿನ ದಾಳಿ ಭಾರತದ ಇತಿಹಾಸದ ಮೇಲಿನ ದಾಳಿ: ಸಿದ್ದರಾಮಯ್ಯ