Select Your Language

Notifications

webdunia
webdunia
webdunia
webdunia

ಆರ್ ಆರ್ ನಗರದಲ್ಲಿ ಮುನಿರತ್ನ ನಾಮಪತ್ರ ಸಲ್ಲಿಕೆ

Muniratna nomination submission in RR Nagar
bangalore , ಸೋಮವಾರ, 17 ಏಪ್ರಿಲ್ 2023 (20:00 IST)
ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ‌ಒಂದೆನಿಸಿರುವ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಇಂದು ನಾಮಪತ್ರ ಸಲ್ಲಿಸಿದ್ರು.. ಬೆಳಗ್ಗೆ 9.20 ಕ್ಕೆ ಜೆ ಪಿ ಪಾರ್ಕ್  ವಾರ್ಡ್ ನಲ್ಲಿರುವ ಚೌಡೇಶ್ವರಿ ದೇವಸ್ಥಾನ ಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದ್ರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದ ನೂರಾರು ಕಾರ್ಯಕರ್ತರು ಬೈಕ್ ಗಳಲ್ಲಿ ಯಶವಂತ ಪುರ ಮಾರ್ಗವಾಗಿ ,ಗೊರಗುಂಟೆ ಪಾಳ್ಯ, ಲಗ್ಗೆರಿ, ಎಚ್ ಎಂಟಿ  ಮೂಲಕ ಆರ್ ಆರ್ ನಗರ್ ಚುನಾವಣಾ ಕಚೇರಿಗೆ ಮಧ್ಯಾಹ್ನ 2.40 ಕ್ಕೆ ಆಗಿಸಿದ ಮುನಿರತ್ನ ಸಾವಿರಾರು ಬೆಂಬಲಿಗರು ಜೈ ಕಾರ ಕೂಗಿದ್ರು. ಇನ್ನೂ ರಸ್ತೆಯಲ್ಲಿ ಪ್ರತಿಯೊಂದು ವಾರ್ಡ್ನ ಕಾರ್ಯಕರ್ತರು ಬೈಕ್ ಗಳ ಮೂಲಕ ಬಂದು ಆರ್ ಆರ್ ನಗರದಲ್ಲಿ ಜಮಾಯಿಸಿದ್ರು. ನಾಮಪತ್ರ ಸಲ್ಲಿಸಿ ಮಾತನಾಡಿದ ಮುನಿರತ್ನ ಐದನೇ ಬಾರಿ ನಾಮಪತ್ರ ಸಲ್ಲಿಸಿದ್ದೇನೆ, ನನಗೆ ನನ್ನ ಕ್ಷೇತ್ರದ ಜನರ ಮೇಲೆ ವಿಶ್ವಾಸವಿದೆ ಈ ಬಾರಿ ಕೂಡ ಗೆಲುವು ಸಾಧಿಸುತ್ತೇನೆ.ಗೆದ್ದೆ ಗೆಲ್ಲುತ್ತೇನೆ ಎಂದು ಅಹಂ ನಿಂದ ಹೇಳುತ್ತಿಲ್ಲ.
 
ಪ್ರತಿಯೋಬ್ಬರಿಗೂ ಕೂಡ ನಾಮಪತ್ರ ಸಲ್ಲಿಸುವ ,ಹಾಗೂ ಚುನಾವಣೆ ಗೆ  ಸ್ಫರ್ಧೆ ಮಾಡುವ ಅವಕಾಶ ಇದೆ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಮನೆ ಮನೆ ಗೆ ತೆರಳಿ ಮತಯಾಚನೆ ಮಾಡುತ್ತೇನೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ರು
 

Share this Story:

Follow Webdunia kannada

ಮುಂದಿನ ಸುದ್ದಿ

ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ