ರಾಜ್ಯದಲ್ಲಿ ನಡೆಯುವ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಎದೆ ಬಡಿತ ಹೆಚ್ಚಾಗುತ್ತಿದೆ, ಅಭ್ಯರ್ಥಿಗಾಗೀ ತುಂಬಾನೆ ಲಾಬಿಗಳು ಕೂಡ ನಡೆಯುತ್ತಿವೆ, ಈ ನಡುವೆ ರಾಜ್ಯದ ಹೈವೊಲ್ಟೇಜ್ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಸಂಭಾವ್ಯ ಅಭ್ಯರ್ಥಿ ನಿತೀಶ್ ಪುರುಷೋತ್ತಮ್ ಇನ್ನೂ ಅಯ್ಕೆಯೇ ಆಗಿಲ್ಲ ಈಗಾಗಲೇ ಹೆಲಿಕಾಪ್ಟರ್ ನಲ್ಲಿ ಪುಷ್ಪಾರ್ಚನೆ ಮೂಲಕ ಗೆಟ್ಟಿಗನಬ್ಬೆ ಪಂಚಾಯ್ತಿಗೆ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು, ಚುನಾವಣೆಗೂ ಮುನ್ನವೇ ಅಖಾಡ ಕಾವೇರಿದೆ, ಅಪಾರ ಸಂಖ್ಯೆಯಲ್ಲಿನ ಕಾರ್ಯಕರ್ತರು ಇತರೇ ಪಕ್ಷಗಳನ್ನ ತೊರೆದು ಬಿಜೆಪಿ ಸೇರ್ಪಡೆಯಾದರು, ಇದೇ ಸಂದರ್ಭದಲ್ಲಿ ಅಪ್ಪ ಮಗನಿಗೆ ಕಾರ್ಯಕರ್ತರು ಗದೆ ಮತ್ತು ಬಿಲ್ಲು ಬಾಣ ನೀಡುವ ಅಭಿನಂದಿಸಿದರು, ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತಾನಾಡಿದ ಎಂಟಿಬಿ.ನಾಗರಾಜ್, ಹೊಸಕೋಟೆಗೆ ಮೆಟ್ರೋ ರೈಲು ಮತ್ತು 5ನೇ ಹಂತದ ಕಾವೇರಿ ನೀರನ್ನ ಒದಗಿಸಲು ಸರ್ಕಾರ ಅನುಮೋದಿಸಿದೆ, ಡಿಪಿಆರ್ ಆಗಬೇಕಿದೆಯೆಂದರು ಜೊತೇಗೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತಾಡುತ್ತಾ ನನ್ನ ಮಗ ನಿತೀಶ್ ಪುರುಷೋತ್ತಮ್ ಗೆ ನೀಡಬೇಕೆಂದು ಹೈಕಮ್ಯಾಂಡ್ ಗೆ ಆಗ್ರಹಿಸಿದ್ದೇನೆ ಯಾರಿಗೇ ಟಿಕೆಟ್ ಕೊಟ್ರೂ ಗೆಲ್ಲಿಸಿಕೊಂಡು ಬರ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು