Publish Date: Mon, 03 Feb 2020 (13:28 IST)
Updated Date: Mon, 03 Feb 2020 (13:31 IST)
ರಾಜ್ಯ ರಾಜಕೀಯದಲ್ಲಿ ಮೈತ್ರಿ ಸರಕಾರ ಪತನ ಬಳಿಕ ಹೈಡ್ರಾಮಾ ಮತ್ತೆ ಬಿಜೆಪಿ ಸರಕಾರದಲ್ಲಿ ನಡೆಯೋ ಲಕ್ಷಣಗಳಿವೆ.
ಬೈ ಎಲೆಕ್ಷನ್ ನಲ್ಲಿ ಸೋತಿರೋ ಶಾಸಕರಿಗೆ ಅತ್ತ ಶಾಸಕ ಸ್ಥಾನವೂ ಇಲ್ಲ, ಇತ್ತ ಸಚಿವ ಸ್ಥಾನವೂ ಸಿಗೋ ಭರವಸೆ ಕಮರಿದೆ.
ಹೀಗಾಗಿ ಅನರ್ಹ ಶಾಸಕರ ರಾಜಕೀಯ ಭವಿಷ್ಯ ಇದೀಗ ಅಡಕತ್ತರಿಗೆ ಸಿಲುಕಿದಂತಾಗಿದೆ. ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಶಂಕರ್ ಈ ಮೂವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಸಂಪುಟ ಪುನರಚನೆ ಮಾಡಿದಾಗ ಮಾತ್ರವೇ ಈ ಮೂವರಿಗೆ ಸಚಿವ ಸ್ಥಾನ ಮುಂದಿನ ದಿನಗಳಲ್ಲಿ ಸಿಗೋ ಲಕ್ಷಣಗಳಿವೆ. ಆದರೂ ಅದು ಅಷ್ಟು ಸುಲಭ ಸಾಧ್ಯವಲ್ಲ.
ಮೂಲ ಬಿಜೆಪಿಗರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಾಗ ಮಾತ್ರ ಅನರ್ಹರ ರಾಜಕೀಯ ಆಸೆ ಜೀವಂತವಾಗುತ್ತದೆ. ಇಲ್ಲಾಂದ್ರೆ ಮತ್ತೆ ಹೊಸ ರಾಜಕೀಯ ಬೆಳವಣಿಗೆಗಳು ಕಾಣೋ ಸಾಧ್ಯತೆ ಕಂಡುಬರುತ್ತಿದೆ.