Publish Date: Sat, 23 Feb 2019 (16:08 IST)
Updated Date: Sat, 23 Feb 2019 (16:11 IST)
ನೀವು ಬಿಜೆಪಿಗೆ ಸೇರ್ಪಡೆಯಾಗುತ್ತಿರಾ? ಹೀಗಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಂಸದರೊಬ್ಬರು ಗರಂ ಆದ ಘಟನೆ ನಡೆದಿದೆ.
ಚಿಕ್ಕೋಡಿಯಲ್ಲಿ ನೂತನ ಪಾಸ್ ಪೋರ್ಟ್ ಕಚೇರಿಗೆ ಚಿಕ್ಕೋಡಿ ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿ ಚಾಲನೆ ನೀಡಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಚಿಕ್ಕೋಡಿಯ ಪೋಸ್ಟ್ ಆಫೀಸಿನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಉದ್ಘಾಟಿಸಲಾಯಿತು.
ಇನ್ನೂ ಸಭೆ ಬಳಿಕ ನೀವು ಬಿಜೆಪಿಗೆ ಹೋಗತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಗರಂ ಆದರು ಸಂಸದ ಪ್ರಕಾಶ ಹುಕ್ಕೇರಿ. ಆಗ ಸಿಟ್ಟಿನಿಂದ ಏನೂ ಮಾತಾಡದೆ ತೆರಳಿದರು.