ಕೇಂದ್ರದ್ದು ಚುನಾವಣೆ ಬಜೆಟ್ ಎಂದ ಸಂಸದ!

ಶನಿವಾರ, 2 ಫೆಬ್ರವರಿ 2019 (14:36 IST)
ಕೇಂದ್ರ ಸರಕಾರ ಮಂಡಿಸಿರುವುದು ಇದು ಪೂರ್ಣಪ್ರಮಾಣದ ಬಜೆಟ್ ಅಲ್ಲ. ಮಧ್ಯಂತರ ಬಜೆಟ್ ಇದಾಗಿದ್ದು, ಕೇವಲ ಚುನಾವಣೆಗಾಗಿಯೇ ಮಾಡಿರುವ ಬಜೆಟ್ ಇದಾಗಿದೆ ಎಂದು ಸಂಸದರೊಬ್ಬರು ಟೀಕೆ ಮಾಡಿದ್ದಾರೆ.

ಚಾಮರಾಜನಗರದಲ್ಲಿ ಸಂಸದ ಆರ್.ದೃವನಾರಾಯಣ್ ಹೇಳಿಕೆ ನೀಡಿದ್ದು, ರೈತರಿಗೆ ಎರಡು ಎಕರೆ ಇರುವವರಿಗೆ ಮೂರು ಇನ್ಟಾಲ್ಮೆಂಟ್ ನಲ್ಲಿ 6 ಸಾವಿರ ಕೊಡ್ತೇವೆ ಅಂತ ಹೇಳಿದ್ದಾರೆ. ವಿಡೋ ಪೆನ್ಸನ್ನೇ 12 ಸಾವಿರ ಸಿಗುತ್ತದೆ.  ಹಾಗಿರುವಾಗ ರೈತರಿಗೆ 6 ಸಾವಿರ ಕೊಡೋದು ದೊಡ್ಡದಲ್ಲ ಎಂದರು.  

ಆದರೆ ಸರ್ಕಾರ ಬಂದು ಐದು ವರ್ಷಗಳೇ ಮುಗಿತಾ ಬಂತು. ರೈತರಿಗೆ ಒಳ್ಳೇದನ್ನ ಮಾಡೋ ಮನಸ್ಸಿದಿದ್ರೆ, ಕಳೆದ ನಾಲ್ಕು ವರ್ಷಗಳಿಂದಲೇ ಮಾಡಬಹುದಿತ್ತು ಎಂದು ದೂರಿದ್ದಾರೆ.  ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೇವಸ್ಥಾನದ ಹುಂಡಿ ಕದ್ದ ಖದೀಮರು