Select Your Language

Notifications

webdunia
webdunia
webdunia
webdunia

ಭಾರತ-ಪಾಕಿಸ್ತಾನ ವಿಶ್ವಕಪ್ ಆಡಬೇಕು, ಟೀಂ ಇಂಡಿಯಾ ಓಡಿಹೋಗಬಾರದು ಎಂದು ಸಂಸದ ಶಶಿ ತರೂರ್

ಭಾರತ-ಪಾಕಿಸ್ತಾನ ವಿಶ್ವಕಪ್ ಆಡಬೇಕು, ಟೀಂ ಇಂಡಿಯಾ ಓಡಿಹೋಗಬಾರದು ಎಂದು ಸಂಸದ ಶಶಿ ತರೂರ್
ನವದೆಹಲಿ , ಶನಿವಾರ, 23 ಫೆಬ್ರವರಿ 2019 (09:16 IST)
ನವದೆಹಲಿ: ಮುಂಬರುವ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಪಂದ್ಯವಾಡಬಾರದು ಎಂಬ ವಾದಗಳ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಶಶಿ ತರೂರ್ ಹೊಸ ವಾದ ಮಂಡಿಸಿದ್ದಾರೆ.


ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಬೇಕು. ಬದಲು ಪಲಾಯನ ಮಾಡಬಾರದು ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಅಭಿಪ್ರಾಯ ಹೊಸ ವಾದ ಹುಟ್ಟು ಹಾಕಿದೆ.

‘ನಮ್ಮ ಸರ್ಕಾರ 40 ಯೋಧರ ಸಾವಿಗೆ ರಾಷ್ಟ್ರೀಯವಾಗಿ ದುಃಖಾಚರಣೆ ಮಾಡಲಿಲ್ಲ. ಹಾಗಿರುವಾಗ ಇನ್ನೂ ಮೂರು ತಿಂಗಳು ಇರುವ ಕೂಟವೊಂದರ ಪಂದ್ಯವೊಂದರಲ್ಲಿ ಭಾರತ-ಪಾಕಿಸ್ತಾನ ಎದುರಾಗಬಾರದು ಎಂಬುದಕ್ಕೆ ಅರ್ಥವಿಲ್ಲ. ಇದು 40 ಜನ ಯೋಧರ ಬಲಿದಾನಕ್ಕೆ ಸರಿಯಾದ ತಿರುಗೇಟು ಆಗಲು ಸಾಧ್ಯವೇ? ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸುಮ್ಮನೇ ವಿಷಯ ಪಲ್ಲಟ ಮಾಡುತ್ತಿದೆಯಷ್ಟೇ. ನಾವು ಸರಿಯಾದ ರೀತಿಯಲ್ಲಿ ತಿರುಗೇಟು ನೀಡಬೇಕಿದೆ’ ಎಂದಿರುವ ತರೂರ್ 1999 ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಆಡಿ ಗೆದ್ದ ಘಟನೆಯನ್ನು ಉದಾಹರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಭಾರತದ ಮಾತು ಕೇಳಲ್ಲ: ಪಾಕ್ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಲೇವಡಿ