Select Your Language

Notifications

webdunia
webdunia
webdunia
webdunia

ನೀನು ನನ್ನ ಗೆಳೆಯ ಎನ್ನುತ್ತಲೇ ಇಮ್ರಾನ್ ಖಾನ್ ಗೆ ಚಾಟಿ ಬೀಸಿದ ಸುನಿಲ್ ಗವಾಸ್ಕರ್

ಇಮ್ರಾನ್ ಖಾನ್
ಮುಂಬೈ: ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ಪಾಕಿಸ್ತಾನ ಪರ ಆಕ್ರೋಶ ಹೆಚ್ಚಾಗಿದೆ. ಈ ನಡುವೆ ತಮ್ಮ ಕ್ರಿಕೆಟ್ ಸ್ನೇಹಿತನೂ ಆಗಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೆಲವು ಸವಾಲು ಹಾಕಿದ್ದಾರೆ.


ನಾನು ರಾಜಕಾರಣಿ ಅಲ್ಲ. ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತ ಪಂದ್ಯ ಬಹಿಷ್ಕರಿಸಬೇಕು ಎಂದು ಹೇಳುವ ಬಿಸಿ ರಕ್ತದ ತರುಣನೂ ಅಲ್ಲ. ನಾನು ನಿನ್ನ ಸ್ನೇಹಿತ. ಆವತ್ತು ನೀನು ಅಧಿಕಾರಕ್ಕೆ ಬಂದಾಗ ಹೇಳಿದೆಯಲ್ಲಾ? ಇನ್ಮುಂದೆ ಹೊಸ ಪಾಕಿಸ್ತಾನ ನೋಡುತ್ತೀರೆಂದು? ಎಲ್ಲಿದೆ ಅದು?

ಭಾರತ ಒಂದು ಹೆಜ್ಜೆಯಿಟ್ಟರೆ ನಾವು ಎರಡು ಹೆಜ್ಜೆ ಮುಂದೆ ಇಡುತ್ತೇವೆ ಎಂದಿದ್ದೆಯಲ್ಲಾ? ಮೊದಲು ನೀವು ಒಂದು ಹೆಜ್ಜೆಯಿಡಿ. ಆಮೇಲೆ ನೋಡಿ, ಭಾರತ ಎಷ್ಟು ಸ್ನೇಹದ ಹೆಜ್ಜೆಯಿಡುತ್ತದೆಂದು? ಗಡಿಯಲ್ಲಿ ನಡೆಯುವ ಉಗ್ರ ಚಟುವಟಿಕೆಗಳನ್ನು ನಿಲ್ಲಿಸು. ಆಮೇಲೆ ನೋಡು, ಭಾರತದವರು ಎಷ್ಟು ನಿಮ್ಮನ್ನು ಪ್ರಶಂಸಿಸುತ್ತಾರೆಂದು’ ಎಂದು ಸುನಿಲ್ ಗವಾಸ್ಕರ್ ನಯವಾಗಿಯೇ ಗೆಳೆಯನಿಗೆ ಚಾಟಿ ಬೀಸಿದ್ದಾರೆ.

ವಿಶೇಷವೆಂದರೆ ತಮ್ಮ ಪದಗ್ರಹಣ ಸಮಾರಂಭಕ್ಕೂ ಕಪಿಲ್ ದೇವ್, ನವಜೋತ್ ಸಿಂಗ್ ಜತೆಗೆ ಸುನಿಲ್ ಗವಾಸ್ಕರ್ ಗೂ ಇಮ್ರಾನ್ ಖಾನ್ ಆಹ್ವಾನವಿತ್ತಿದ್ದರು. ಆದರೆ ಸರ್ಕಾರದ ಒಪ್ಪಿಗೆಯಿಲ್ಲದೇ ನಾನು ಪಾಕಿಸ್ತಾನಕ್ಕೆ ಹೋಗಲಾರೆ ಎಂದು ಗವಾಸ್ಕರ್ ಭಾಗವಹಿಸಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ನಿಂದ ಪಾಕಿಸ್ತಾನವನ್ನು ಬಹಿಷ್ಕರಿಸಲು ಭಾರತ ಹೇಳೋ ಹಾಗಿಲ್ಲ!