Select Your Language

Notifications

webdunia
webdunia
webdunia
webdunia

ಭಾರತ ವಿಶ್ವಕಪ್ ನಲ್ಲಿ ತಮ್ಮ ಜತೆ ಆಡದು ಎಂಬ ಭಯಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಮಾಡಿದ್ದೇನು ಗೊತ್ತಾ?!

webdunia
ಮುಂಬೈ , ಗುರುವಾರ, 21 ಫೆಬ್ರವರಿ 2019 (09:23 IST)
ಮುಂಬೈ: ಪುಲ್ವಾಮಾದಲ್ಲಿ ಯೋಧರ ಹತ್ಯೆ ಬಳಿಕ ಪಾಕಿಸ್ತಾನ ವಿರುದ್ಧ ಭಾರತದಲ್ಲಿ ಆಕ್ರೋಶ ಹೆಚ್ಚಾಗಿದ್ದು, ವಿಶ್ವಕಪ್ ನಲ್ಲೂ ಟೀಂ ಇಂಡಿಯಾ ಆ ದೇಶದ ವಿರುದ್ಧ ಕ್ರಿಕೆಟ್ ಆಡಬಾರದು ಎಂಬ ಒತ್ತಾಯಗಳು ಹೆಚ್ಚಾಗತೊಡಗಿವೆ.


ಅಲ್ಲದೆ, ಬಿಸಿಸಿಐ ಕೂಡಾ ಕೇಂದ್ರದ ಒಪ್ಪಿಗೆಯಿಲ್ಲದೇ ಪಾಕ್ ಜತೆಗೆ ಕ್ರಿಕೆಟ್ ಆಡಲ್ಲ ಎಂದಿದೆ. ಈ ಬೆಳವಣಿಗೆಯಿಂದ ಬೆಚ್ಚಿರುವ ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಇದೀಗ ದುಬೈನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿದೆ.

ದುಬೈನಲ್ಲಿ ಐಸಿಸಿ ಸಭೆಯಲಿದ್ದು, ಈ ವೇಳೆ ಬಿಸಿಸಿಐ ಜತೆ ಮಾತುಕತೆ ನಡೆಸಿ ವಿಶ್ವಕಪ್ ನಲ್ಲಿ ಪಾಕ್ ಜತೆಗೆ ಆಟಕ್ಕೆ ಬಹಿಷ್ಕಾರ ಹಾಕದಂತೆ ಮನವಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಅತ್ತ ಐಸಿಸಿ ಕೂಡಾ ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುವ ಕುರಿತು ಕೇಳಿದ ಪ್ರಶ್ನೆಗೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಕಂಗೆಟ್ಟಿರುವ ಪಾಕ್ ಬಿಸಿಸಿಐ ಜತೆಗೆ ರಾಜೀಸಂಧಾನಕ್ಕೆ ಮುಂದಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಯಾಕೆ ಯಾವಾಗ್ಲೂ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಗೆ ಸಲಹೆ ಕೊಡ್ತಾರೆ? ಕಾರಣ ಬಯಲು!