Publish Date: Thu, 21 Feb 2019 (09:37 IST)
Updated Date: Thu, 21 Feb 2019 (09:38 IST)
ಮುಂಬೈ: ವಿಶ್ವಕಪ್ ನಲ್ಲಿ ಕೇಂದ್ರ ಸರ್ಕಾರದ ಒಪ್ಪಿಗೆಯಿಲ್ಲದೇ ಪಾಕಿಸ್ತಾನ ವಿರುದ್ಧ ವಿಶ್ವಕಪ್ ನಲ್ಲಿ ಕ್ರಿಕೆಟ್ ಆಡಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಆದರೆ ಅದರಿಂದ ನಷ್ಟ ಯಾರಿಗೆ ಗೊತ್ತಾ?
ಈಗಾಗಲೇ ವಿಶ್ವಕಪ್ ವೇಳಾಪಟ್ಟಿಗಳು ನಿರ್ಧಾರವಾಗಿರುವುದರಿಂದ ಅದನ್ನು ಬದಲಾಯಿಸುವ ಸ್ಥಿತಿಯಲ್ಲಿ ಐಸಿಸಿ ಇಲ್ಲ. ಹೀಗಾಗಿ ಭಾರತ ಪಾಕ್ ವಿರುದ್ಧದ ಪಂದ್ಯ ಬಹಿಷ್ಕರಿಸಬೇಕಾಗುತ್ತದೆ.
ಬಹಿಷ್ಕರಿಸಿದರೆ ಅದರಿಂದ ನಷ್ಟವಾಗುವುದು ಟೀಂ ಇಂಡಿಯಾಕ್ಕೆ. ಒಂದು ವೇಳೆ ನಿರ್ಣಾಯಕ ಘಟ್ಟದಲ್ಲಿ ಉಭಯ ದೇಶಗಳು ಮುಖಾಮುಖಿ್ಯಾಗಬೇಕಾಗಿದ್ದಾಗ ಭಾರತ ಪಂದ್ಯ ಬಹಿಷ್ಕರಿಸಿದರೆ ಆ ಪಂದ್ಯವನ್ನು ಪಾಕ್ ಗೆದ್ದಿದೆ ಎಂದು ಘೋಷಿಸಬೇಕಾಗುತ್ತದೆ. ಇದರಿಂದ ಸಂಪೂರ್ಣ ಅಂಕ ಪಾಕ್ ಗೆ ಸಿಗುತ್ತದೆ. ಇದೇ ಕಾರಣಕ್ಕೆ ಬಿಸಿಸಿಐ ಕೂಡಾ ಖಡಕ್ಕಾಗಿ ಪಂದ್ಯ ಬಹಿಷ್ಕರಿಸುವುದಾಗಿ ಹೇಳಲು ಹಿಂಜರಿಯುತ್ತಿದೆ. ಇದು ಭಾರತದ ವಿಶ್ವಕಪ್ ಕನಸಿಗೂ ಕಂಟಕವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ