Publish Date: Sat, 15 Jun 2024 (12:15 IST)
Updated Date: Sat, 15 Jun 2024 (12:16 IST)
ಬೆಂಗಳೂರು: ಆಟಿಸ್ಟಿಕ್ ಕಾಯಿಲೆಯಿಂದ ಬಳಲುತ್ತಿದ್ದ ಮಗಳ ಪಾಲಿಗೆ ಈ ತಾಯಿಯೇ ಹಂತಕಿಯಾಗಿದ್ದಳು. ಮೂರೂವರೆ ವರ್ಷದ ಮಗಳನ್ನು ಹತ್ಯೆ ಮಾಡಿದ ತಪ್ಪಿಗೆ ಈಗ ತಾಯಿ ಜೈಲು ಪಾಲಾಗಿದ್ದಾಳೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ.
35 ವರ್ಷದ ತಾಯಿ ರಮ್ಯಾ ಎಂಬಾಕೆಯನ್ನು ಪೊಲೀಸರು ಈ ಸಂಬಂಧ ಬಂಧಿಸಿದ್ದಾರೆ. ಈಕೆಗೆ ಮೂರೂವರೆ ವರ್ಷದ ಇಬ್ಬರು ಅವಳಿ ಹೆಣ್ಣುಮಕ್ಕಳಿದ್ದರು. ಇಬ್ಬರಿಗೂ ಆಟಿಸ್ಟಿಕ್ ಕಾಯಿಲೆಯಿತ್ತು. ಆದರೆ ಒಬ್ಬಾಕೆಗೆ ತೀವ್ರ ಮಟ್ಟದಲ್ಲಿತ್ತು. ಆಕೆಯ ಭವಿಷ್ಯದ ಬಗ್ಗೆ ತಾಯಿಗೆ ಚಿಂತೆಯಾಗಿತ್ತು.
ಇದರಿಂದಾಗಿ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಮಗಳ ಭವಿಷ್ಯದ ಚಿಂತೆಯಿಂದಾಗಿ ತಾಯಿ ಹತ್ಯೆ ಮಾಡಿದ್ದಾಳೆ. ಇದೀಗ ತಾಯಿ ರಮ್ಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ಪತಿ ನಾರ್ವೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ರಮ್ಯಾ ಮಕ್ಕಳ ಕಾಯಿಲೆ ವಿಚಾರವಾಗಿ ಚಿಂತೆ ಮಾಡಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಇನ್ನೊಬ್ಬ ಮಗಳು ಬದುಕುಳಿದಿದ್ದಾಳೆ.