Select Your Language

Notifications

webdunia
webdunia
webdunia
webdunia

ಗೋವನ್ನು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ- ಬಾಬಾ ರಾಮ್ ದೇವ್

ಗೋವನ್ನು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ- ಬಾಬಾ ರಾಮ್ ದೇವ್
ಉಡುಪಿ , ಬುಧವಾರ, 20 ನವೆಂಬರ್ 2019 (06:19 IST)
ಉಡುಪಿ : ತಾಯಿಗೆ ಸಮಾನವಾದ ಗೋವನ್ನು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ ಎಂದು ಯೋಗ ಗುರು ಬಾಬಾ ರಾಮ್ ದೇವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.




ಉಡುಪಿಯಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಗೋವು ತಾಯಿಗೆ ಸಮನ. ಅದನ್ನು ತಿನ್ನುತ್ತೀರಿ ಅಂದ್ರೆ ನಿಮ್ಮ ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ. ಗೋವು ಭಕ್ಷಕರೇ ಮಾಂಸ ತಿನ್ನಲೇ ಬೇಕೆಂದರೆ ಗೋವನ್ನು ಮಾತ್ರ ತಿನ್ನಬೇಡಿ ಕೋಳಿ, ಮೀನು, ಕುದುರೆ, ಕತ್ತೆ, ನಾಯಿ, ಏನಾದರೂ ತಿನ್ನಿ ಎಂದು ಹೇಳಿದ್ದಾರೆ.


ಭಾರತೀಯ ಮುಸಲ್ಮಾನರಿಗೆ ಕ್ರೂರ ಮೊಘಲರ ಆಡಳಿತ ಆದರ್ಶವಾಗಬಾರದು. ಭಾರತೀಯ ಮುಸಲ್ಮಾನರು ನಮ್ಮವರೇ, ಗೋಹತ್ಯಾ ನಿಷೇಧ ಬೆಂಬಲಿಸಬೇಕು. ಅಕ್ಬರ್, ಬಾಬರ್, ಹುಮಾಯೂನ್, ಔರಂಗಜೇಬನ ಕಾಲದಲ್ಲೂ ಗೋಹತ್ಯಾ ನಿಷೇಧ ಇತ್ತು. ಆದರೆ ಈಗ ಯಾಕಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಯನ್ನು ಅನುಭವಿಸಿ ಕೊಲೆ ಮಾಡಿದ್ದ ಮಾವ ಏನಾದ?