Select Your Language

Notifications

webdunia
webdunia
webdunia
webdunia

ಮೊಬೈಲ್ ರೇಡಿಯೇಷನ್ ನಿಂದ ರಕ್ಷಣೆ ಪಡೆಯುವ ಮಾರ್ಗ ಸೂಚಿಸಿದ ಬಾಬಾ ರಾಮದೇವ್

ಮೊಬೈಲ್ ರೇಡಿಯೇಷನ್ ನಿಂದ ರಕ್ಷಣೆ ಪಡೆಯುವ ಮಾರ್ಗ ಸೂಚಿಸಿದ ಬಾಬಾ ರಾಮದೇವ್
ಉಡುಪಿ , ಭಾನುವಾರ, 17 ನವೆಂಬರ್ 2019 (10:16 IST)
ಉಡುಪಿ : ಮೊಬೈಲ್ ರೇಡಿಯೇಷನ್ ನಿಂದ ಮೆದುಳಿನ ಮೇಲೆ ಹಾನಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಇಂತಹ ರೇಡಿಯೇಷನ್ ಗಳಿಂದ ಹೇಗೆ ರಕ್ಷಣೆ ಪಡೆಯಬೇಕೆಂಬುದನ್ನು ಇದೀಗ  ಯೋಗಗುರು ಬಾಬಾ ರಾಮದೇವ್ ತಿಳಿಸಿಕೊಟ್ಟಿದ್ದಾರೆ.



ಉಡುಪಿ ಕೃಷ್ಣ ಮಠದಲ್ಲಿ ನಡೆದ ಯೋಗ ಶಿಬಿರದಲ್ಲಿ ಪಾಲ್ಗೊಂಡ ಅವರು, ಮೊಬೈಲ್ ಕವರ್ ನ ಹಿಂದೆ ತುಳಸಿ ದಳಗಳನ್ನು ಇಟ್ಟುಕೊಂಡರೆ  ರೇಡಿಯೇಷನ್ ನಿಂದ ರಕ್ಷಣೆ ಪಡೆಯಬಹುದು ಎಂದು ಹೇಳುವುದರ ಮೂಲಕ ಮೊದಲಬಾರಿಗೆ ಈ ಮಾಹಿತಿಯನ್ನು ಹೊರಹಾಕಿದ್ದಾರೆ.

 

ಅಲ್ಲದೇ ಮನೆಯಲ್ಲಿರುವ ಟಿವಿ, ಲ್ಯಾಪ್ ಟಾಪ್, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ವಿಕಿರಣಗಳಿಂದ ರಕ್ಷಣೆ ಪಡೆಯಲು ಮನೆಯಲ್ಲಿ ಹೆಚ್ಚು ತುಳಸಿ ಗಿಡವನ್ನು ಬೆಳೆಸಬೇಕು ಎಂದು ಅವರು ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇವನ್ನು ಬಳಸಿ ರೋಮ್ಯಾನ್ಸ್ ಮಾಡಿದ್ರೆ ಡೇಂಜರ್