Select Your Language

Notifications

webdunia
webdunia
webdunia
webdunia

ದೀಪಾವಳಿಗೆ ಫೋನ್ ಖರೀದಿಸಿದರೆ ಸಂಸದರ ಕೈಗೆ ಸಿಕ್ಕಿದ್ದು ಕಲ್ಲುಗಳು

ದೀಪಾವಳಿಗೆ ಫೋನ್ ಖರೀದಿಸಿದರೆ ಸಂಸದರ ಕೈಗೆ ಸಿಕ್ಕಿದ್ದು ಕಲ್ಲುಗಳು
ಕೋಲ್ಕತ್ತಾ , ಮಂಗಳವಾರ, 29 ಅಕ್ಟೋಬರ್ 2019 (17:16 IST)
ಅವರು ಜನಪ್ರಿಯ ಸಂಸದರು. ತಮ್ಮ ಮಗನಿಗೆ ದೀಪಾವಳಿ ಹಬ್ಬದ ಗಿಫ್ಟ್ ಕೊಡೋಕೆ ಅಂತ ಆನ್ ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದಾರೆ. ಆದರೆ ಕೈಗೆ ಬಂದಿದ್ದು ಮಾತ್ರ ಕಲ್ಲುಗಳು.

ಆನ್ ಲೈನ್ ಸೇವಾ ಸಂಸ್ಥೆಯು ಸಂಸದರೊಬ್ಬರಿಗೆ ಮೊಬೈಲ್ ಗಳ ಬದಲಾಗಿ ಎರಡು ಕಲ್ಲುಗಳನ್ನು ಕಳುಹಿಸಿಕೊಟ್ಟ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಮಾಲ್ಡಾದ ಸಂಸದ ಖಾಗನ್ ಮುರ್ಮು ಅವರೇ ಆನ್ ಲೈನ್ ನಲ್ಲಿ ಮೊಬೈಲ್ ಖರೀದಿಸಿ ವಂಚನೆಗೆ ಒಳಗಾದವರು.

ಮೊಬೈಲ್ ಆರ್ಡರ್ ಮಾಡಿದ್ದವರಿಗೆ ಎರಡು ಕಲ್ಲುಗಳು ಬಂದಿವೆ. ಈ ಕುರಿತು ಸಂಸದರು ಪೊಲೀಸ್ ಠಾಣೆಯಲ್ಲಿ ಕೇಸ್ ಫೈಲ್ ಮಾಡಿದ್ದಾರೆ.

 ಸಂಸ್ಥೆ ಮಾಡಿದ ತಪ್ಪು ಇದಲ್ಲ ಅಂತಿರೋ ಪೊಲೀಸರು, ನಡುವೆ ಯಾರ ಕೈವಾಡವಿದೆ ಅನ್ನೋದನ್ನು ಪತ್ತೆ ಮಾಡುತ್ತೇವೆ ಅಂತ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಗೆ ಸವಾಲ್ ಹಾಕಿದ ಅನರ್ಹ ಶಾಸಕ ಸುಧಾಕರ್