Select Your Language

Notifications

webdunia
webdunia
webdunia
webdunia

ಅತ್ತೆ ಮರ್ಡರ್.. ಸೊಸೆ & ಗ್ಯಾಂಗ್‌ ಲಾಕ್

murder
bangalore , ಮಂಗಳವಾರ, 17 ಅಕ್ಟೋಬರ್ 2023 (17:00 IST)
ಪ್ರಿಯಕರನ ಜೊತೆ ಸೇರಿ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಸೊಸೆ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಶ್ಮಿ, ಪುರುಷೋತ್ತಮ್, ಅಕ್ಷಯ್ ಬಂಧಿತ ಆರೋಪಿಗಳು. ಈ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಶ್ಮಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತನ ಜೊತೆ ಸೇರಿ ಅತ್ತೆ ಲಕ್ಷ್ಮಮ್ಮನನ್ನ ಕೊಂದಿದ್ದಳು. ಆರೋಪಿ ರಶ್ಮಿಯು ಮಂಜುನಾಥ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಕ್ರಮೇಣ ತಮ್ಮ ಮನೆಯ ಮೇಲೆ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ಸಂಪರ್ಕ ಹೊಂದಿದ್ದಳು. ಇತ್ತ ಮನೆಯ ಹಣದ ವ್ಯವಹಾರ ಸಂಬಂಧ ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ತಾನೇ ಮನೆ ವ್ಯವಹಾರ ನೋಡಿಕೊಳ್ಳಬೇಕು ಎಂದು ರಶ್ಮಿ ಕಾದು ಕುಳಿತಿದ್ದಳು. ಅದರಂತೆ ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಲೆ ಮಾಡುವ ಪ್ಲಾನ್ ಮಾಡಿದ್ದಳು. ಅಕ್ಟೋಬರ್ 10ರಂದು ಪ್ರಿಯಕರ ಅಕ್ಷಯ್ ಮತ್ತು ಆತನ ಸ್ನೇಹಿತ ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆಯನ್ನು ಕೊಲೆ ಮಾಡಿದ್ದಳು. ನಂತರ ಹಾರ್ಟ್ ಅಟ್ಯಾಕ್ ಅಂತಾ ಸೀನ್ ಕ್ರಿಯೇಟ್ ಮಾಡಿದ್ದರು. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಲ್‌ ಹೊರೆ