Select Your Language

Notifications

webdunia
webdunia
webdunia
webdunia

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಲ್‌ ಹೊರೆ

ಗೃಹಜ್ಯೋತಿ
ಮಳೆ ಕೊರತೆಯಿಂದ ಸೃಷ್ಟಿಯಾದ ಬರ ಒಂದೆಡೆಯಾದರೆ, ಅವಧಿಗೂ ಮುನ್ನವೇ ಬಿಸಿಲಿನ ಬೇಗೆ ಆವರಿಸಿದ್ದರಿಂದ ವಿದ್ಯುತ್‌ ಬಳಕೆ ಹೆಚ್ಚಾಗಿ ಗೃಹ ಜ್ಯೋತಿ ಫಲಾನುಭವಿಗಳಿಗೆ ಅಕ್ಟೋಬರ್‌ ತಿಂಗಳ ವಿದ್ಯುತ್‌ ಬಿಲ್ ತುಸು ಹೊರೆಯಾಗಿದೆ. ನೀರಿದ್ದರೂ ಹೊಲಕ್ಕೆ ಹರಿಸಲು ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ ಕೆಲವೆಡೆ ಲೋಡ್‌ಶೆಡ್ಡಿಂಗ್ ಕಿರಿಕಿರಿ ಇಷ್ಟೆಲ್ಲ ಗೋಳಿನ ಮಧ್ಯೆ ಸೆಕೆ ತಡೆಯಲು ಅರಿವಿಲ್ಲದೆ ಅತಿಯಾಗಿ ವಿದ್ಯುತ್ ಬಳಸಿಕೊಂಡವರಿಗೆ ಹೆಚ್ಚುವರಿ ಹಣ ಪಾವತಿಸುವ ಬಿಲ್ ರವಾನೆಯಾಗುತ್ತಿದೆ. ಹಿಂದಿನ ತಿಂಗಳು ಗೃಹ ಜ್ಯೋತಿ ಗ್ಯಾರಂಟಿಯಿಂದ ಶೂನ್ಯ, 10, 20, 30 ರೂ. ವಿದ್ಯುತ್‌ ಬಿಲ್ ಪಾವತಿಸಿದವರಿಗೆ ಈ ತಿಂಗಳು 300, 400, 600 ರೂ. ವರೆಗೆ ಹೆಚ್ಚುವರಿ ಮೊತ್ತದ ಬಿಲ್ ಬಂದಿದೆ. ಗೃಹ ಜ್ಯೋತಿ ಫಲಾನುಭವಿಗಳಿಗೆ ವರ್ಷದ ಒಟ್ಟು ವಿದ್ಯುತ್ ಬಳಕೆ ಆಧಾರದ ಮೇಲೆ ತಿಂಗಳ ಸರಾಸರಿ ಲೆಕ್ಕ ಹಾಕಿ, ಅದರ ಮೇಲೆ ಶೇ.10ರಷ್ಟು ಹೆಚ್ಚುವರಿ ಯುನಿಟ್ ವಿದ್ಯುತ್ ಉಚಿತ ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ತಲುಪಿದ ಕಾವೇರಿ ಕಿಚ್ಚು