Select Your Language

Notifications

webdunia
webdunia
webdunia
webdunia

ಯುವಕ ಯುವತಿ ಪ್ರೀತಿಗೆ ಯುವತಿ ಪೋಷಕರೆ ವಿಲನ್

ಯುವಕ ಯುವತಿ ಪ್ರೀತಿಗೆ ಯುವತಿ ಪೋಷಕರೆ ವಿಲನ್
bangalore , ಬುಧವಾರ, 11 ಅಕ್ಟೋಬರ್ 2023 (15:00 IST)
ಯುವತಿ ಮನೆಯವರಿಗೆ ಹೆದರಿ ಯುವಕ ತಮಿಳುನಾಡಿನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ನ್ಯಾಯಕ್ಕಾಗಿ ಪ್ರಿಯತಮೆ ಹೋರಾಟ ನಡೆಸ್ತಿದ್ದು,ತಂದೆ ತಾಯಿ ಮನೆಗೆ ಹೋಗದೇ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ.ತೋಟಶ್ರೀ ಮಣಿಕಂಠ ಐಶ್ವರ್ಯ ಎಂಬ ಯುವತಿಯನ್ನ ಪ್ರೀತಿ ಮಾಡ್ತಿದ್ದ.ಖಾಸಗಿ ಕಾಲೇಜಿನಲ್ಲಿ  ಯುವಕ&ಯುವತಿ ವ್ಯಾಸಂಗ ಮಾಡುತ್ತಿದ್ರು.
 
ಇಬ್ಬರ ಪ್ರೀತಿ ವಿಚಾರ ಯುವಕನ ಮನೆಯವರಿಗೆ ಗೊತ್ತಾಗಿತ್ತುಮದುವೆಗೂ ಯುವಕನ ಪೋಷಕರು ಸಮ್ಮತಿಸಿದ್ದರು.ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ವಾಸ ಮಾಡ್ತಿದ್ರು.ವಿಚಾರ ಗೊತ್ತಾಗಿ ಜುಲೈ 11 ರಂದು ಇಬ್ಬರಿದ್ದ ಮನೆಗೆ ಯುವತಿ ಕುಟುಂಬಸ್ಥರು ಆಮಿಸಿದ್ರು.ಹೇಮಂತ್,ರವಿಕುಮಾರ್,ದೀಕ್ಷಿತ್,ಯಶೋದ,ಅಂಜಲಿ ಆಗಮಿಸಿದ್ದು,ಮಣಿಕಂಠ ಮತ್ತು ಐಶ್ವರ್ಯ ಇಬ್ಬರನ್ನು ರೂಮ್ ನಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ.ಬಳಿಕ ಯುವತಿಯನ್ನ ತಮ್ಮ ಮನೆಗೆ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ.
 
ಇದರಿಂದಾಗಿ ಮನನೊಂದಿದ್ದ ಯುವಕ ಮಣಿಕಂಠ ತಮಿಳುನಾಡಿನ ಜೋಲಾರಪೇಟೆಗೆ ಹೋಗಿದ್ದ .ರೈಲಿಗೆ ತಲೆಕೊಟ್ಟು ಮಣಿಕಂಠ ಸಾವನ್ನಪ್ಪಿದ್ದ.ಸಾವಿಗೂ ಮುನ್ನ ತನ್ನ ತಾಯಿಗೆ ಲೊಕೇಶನ್ ಕಳುಹಿಸಿದ್ದಅಲ್ಲದೆ ವಾಯ್ಸ್ ಮೆಸೆಜ್ ಕಳಿಸಿ ಕ್ಷಮೆ ಕೇಳಿದ್ದ.ಯುವತಿ ಜೊತೆಗೂ ಫೋನ್ ನಲ್ಲಿ ಯುವಕ ಮಾತನಾಡಿದ್ದ.ನಮ್ಮಿಬ್ಬರ ನೆನಪಿಗೆ ಬೆಕ್ಕಿನ ಮರಿ ಇದೆ ಚನ್ನಾಗಿ ನೋಡಿಕೊ‌ ಎಂದಿದ್ದ.ಮೃತದೇಹ ಪತ್ತೆ ಆದ ಬಳಿಕ  ಜೋಲಾರಪೇಟೆ ರೈಲ್ವೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಕೃತ್ಯ ನಡೆದ ಆಧಾರದ ಮೇಲೆ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆಯಾಗಿದೆ.ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗೆ ಬಂದು ಯುವತಿ ಹೇಳಿಕೆ ದಾಖಲಿಸಿದ್ದು,ಸಾವಿಗೆ ಕಾರಣ ಆದ ತಮ್ಮ ಕುಟುಂವಸ್ಥರಿಗೆ ಶಿಕ್ಷೆ ಆಗಬೇಕು ಎಂದು ಯುವತಿ ಹೇಳಿದ್ದಾಳೆ. ಯುವತಿ ನಾನು ಒಂದೂವರೆ ವರ್ಷದವಳಿದ್ದಾಗ ತಾಯಿ ತೀರಿಕೊಂಡ್ರು.ಆಗ ನಮ್ಮ ತಂದೆ ಮತ್ತೊಂದು ವಿವಾಹವಾಗಿದ್ರು.ನನ್ನ ಮಲತಾಯಿ ನನಗೆ ಸಾಕಷ್ಟು ತೊಂದರೆ ನೀಡಿದ್ರು.

ಆ ಕ್ಷಣದಿಂದ ನನ್ನ ಅಜ್ಜಿ ಮನೆಯಲ್ಲಿ ಬೆಳೆದಿದ್ದೆ.ಓದೋದಕ್ಕಾಗಿ ಬೆಂಗಳೂರಿನ ಖಾಸಗಿ ಕಾಲೇಜಿಗೆ ಸೇರಿದೆ.ಅಲ್ಲಿ ಮಣಿಕಂಠನ ಪರಿಚಯವಾಗಿ ಪ್ರೀತಿ ಆಗಿತ್ತು.ಇಬ್ಬರು ಒಟ್ಟಿಗೆ ವಾಸ ಕೂಡ ಮಾಡ್ತಿದ್ವಿ.ನಮ್ಮ ಸಂಬಂಧಿಕರು ಬಂದು ಗಲಾಟೆ ಮಾಡಿದ್ರು.ಆತನ ಸಾವಿಗೆ ನಮ್ಮ‌ ಕುಟುಂಬಸ್ಥರೇ ಕಾರಣ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಯುವತಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ದೀಕ್ಷಿತ್,ಹೇಮಂತ್,ಚಿಕ್ಕಪ್ಪ ರವಿ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಾನನಗರಿಯಲ್ಲಿ ಕಂಬಳದ ಕಂಪು..!