Publish Date: Mon, 04 Jun 2018 (19:48 IST)
Updated Date: Mon, 04 Jun 2018 (19:50 IST)
ಕಾಲಾ ಚಿತ್ರಕ್ಕೂ ಕಾವೇರಿಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಬಹುಭಾಷ ನಟ ಪ್ರಕಾಶ್ ರೈ ಮತ್ತೊಮ್ಮೆ ಕರ್ನಾಟಕ ಪಾಲಿಗೆ ಖಳ ನಾಯಕ ಎಂಬುದನ್ನ ಸಾಬೀತು ಮಾಡಿದ್ದಾರೆ. ಈ ನಟನಿಗೆ ಕಾಸು ಮುಖ್ಯವಾಗಿ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಪ್ರಕಾಶ್ ರೈ ಟ್ವೀಟ್ ಗೆ ಕಿಡಿ ಕಾರಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಜನಿಕಾಂತ್ ಅವರ ಕಾಲಾ ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧ ಮಾಡಿರುವುದಕ್ಕೆ ಬಹುಭಾಷ ನಟ ಪ್ರಕಾಶ್ ರೈ ಟ್ವಿಟರ್ನಲ್ಲಿ ಕಾಲಾ ಚಿತ್ರಕ್ಕೂ ಕಾವೇರಿ ವಿಚಾರಕ್ಕೂ ಸಂಭಂದವಿಲ್ಲವೆಂದು ಟ್ವೀಟ್ ಮಾಡಿದರು.
ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಸಿದ ಸಂಸದ ಪ್ರತಾಪ್, ರಜನಿಕಾಂತ್ ಅವರನ್ನ ನಾವೆಲ್ಲರೂ ಇಷ್ಟಪಟ್ಟಿದ್ದೇವೆ. ಆದರೆ ಈ ಹಿಂದೆ ಕಾವೇರಿ ವಿಚಾರವಾಗಿ ಕೊಟ್ಟಂತಹ ಹೇಳಿಕೆ ಬಹಳ ನೋವನ್ನ ಕೊಟ್ಟದೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಸಹಜವಾಗಿ ಅವರ ಚಿತ್ರ ಬಿಡುಗಡೆಗೆ ತೀರ್ವ ವಿರೋಧ ವ್ಯಕ್ತ ಪಡಿಸಿದ್ದಾರೆ.
ಬಹುಭಾಷ ನಟ ಪ್ರಕಾಶ ರೈ ರಜನಿಕಾಂತ್ ಅವರಿಗೆ ಸಲಹೆಯನ್ನ ಕೊಡುವುದರ ಬದಲು ಕಾವೇರಿಗೂ ಕಾಲಾ ಚಿತ್ರಕ್ಕೂ ಸಂಬಂಧವಿದಲ್ಲ ಎಂದು ಹೇಳುವ ಮೂಲಕ ಪ್ರಕಾಶ್ ರೈ ಕರ್ನಾಟಕದ ಪಾಲಿಗೆ ಖಳನಾಯಕ ಎಂಬುದನ್ನ ಸಾಭೀತು ಮಾಡಿದ್ದಾರೆಂದು ವಾಗ್ದಾಳಿ ನಡೆಸಿದರು.