Publish Date: Mon, 04 Jun 2018 (19:37 IST)
Updated Date: Mon, 04 Jun 2018 (19:38 IST)
ಜನಾದೇಶ ಕಳೆದುಕೊಂಡು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಅಪವಿತ್ರ ಮೈತ್ರಿಯಿಂದ ಶಿಶು ಹುಟ್ಟಿದೆ. ಹಳಸಿದ ಹಾಗೂ ಹಸಿದವರ ಸರ್ಕಾರವಿದು ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಕಾಂಗ್ರೇಸೇತರ ಪಕ್ಷಗಳಿಗೆ ಮೋದಿ ಭಯ ಕಾಣ್ತಾ ಇದೆ ಈ ಕಾರಣಕ್ಕಾಗಿ ಮೋದಿ ವಿರುದ್ಧ ಅವು ಒಟ್ಟಾಗುತ್ತಿವೆ. ಹೇಗಾದರೂ ಮಾಡಿ ಮೋದಿಯವರನ್ನು ಸೋಲಿಸಬೇಕು. ಪಾಕ್ ಹಾಗೂ ಚೀನಾ ಹಾಗೂ ಇಲ್ಲಿಯ ರಾಜಕೀಯ ಪಕ್ಷಗಳ ಯೋಚನೆ ಒಂದೇ ರೀತಿ ಇದೆ ಎಂದು ತಿರುಗೇಟು ನೀಡಿದರು.
ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಒಂದು ಷಡ್ಯಂತರ ನಡೆದಿದೆ ಎಂದರು. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ತುಂಡು ಗುಂಡು ಸಂಸ್ಕೃತಿ ಕಾಲಿಟ್ಟಿದೆ. ಚುನಾವಣೆಯಲ್ಲಿ ಬಹುಮತ ಸಿಗದ ವಿಚಾರವಾಗಿ ಹೇಳಿದ ಅವರು, ಇದಕ್ಕೆ ನಮ್ಮದೇ ಕೆಲವು ವೈಫಲ್ಯ ಕಾರಣ ಇದೆ ಎಂದರು.
ಜಾತಿ ಸಮೀಕರಣಕ್ಕೆ ಜೋತು ಬಿದ್ದದ್ದು ಹಾಗೂ ಆಂತರಿಕ ಭಿನ್ನತೆಯೂ ಕಾರಣ. ಈ ಕುರಿತು ವಿಸ್ಕೃತ ಸಮಾಲೋಚನೆ ಸಭೆ ನಡೆಸುತ್ತೇವೆ ಎಂದರು.
ಉಡುಪಿ ದನದ ವ್ಯಾಪಾರಿ ಹುಸೇನಬ್ಬ ಹತ್ಯೆ ವಿಚಾರ ಪ್ರಸ್ತಾಪಿಸಿದ ಸಿ.ಟಿ.ರವಿ, ಯಾವುದೇ ರೀತಿಯ ಹತ್ಯೆಯನ್ನ ಬಿಜೆಪಿ ಬೆಂಬಲಿಸೋದಿಲ್ಲ. ಕಾನೂನುಬಾಹಿರ ಚಟುವಟಿಕೆಯನ್ನೂ ಬೆಂಬಲಿಸೋದಿಲ್ಲ. ತನಿಖೆ ನಡೆಯಲಿ ಯಾರು ತಪ್ಪು ಮಾಡಿದ್ರೂ ಕ್ರಮ ಆಗಲಿ ಎಂದರು.