Publish Date: Mon, 04 Jun 2018 (12:18 IST)
Updated Date: Mon, 04 Jun 2018 (12:19 IST)
ಬೆಂಗಳೂರು: ತಾನು ಆರೂವರೆ ಕೋಟಿ ಜನರು ಆರಿಸಿದ ಮುಖ್ಯಮಂತ್ರಿ ಅಲ್ಲ ಎಂದು ಮತ್ತೊಮ್ಮೆ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿ ಸಿಎಂ ಕುಮಾರಸ್ವಾಮಿ ವಿವಾದಕ್ಕೆ ಸಿಲುಕಿದ್ದರು. ಇದೀಗ ಆ ಮಾತನ್ನು ಪುನರುಚ್ಚರಿಸಿದ್ದಾರೆ.
‘ನಾನು ಆರೂವರೆ ಕೋಟಿ ಜನ ಆರಿಸಿದ ಸಿಎಂ ಅಲ್ಲ. ರಾಜಕೀಯದಲ್ಲಿ ಸಾಂದರ್ಭಿಕ ಶಿಶು. ಹಿಂದೆಯೂ ನಾನು ಸತ್ಯ ಹೇಳಿದ್ದೆ. ಆದರೆ ಅದಕ್ಕೆ ಬೇರೆಯದೇ ಅರ್ಥ ನೀಡಲಾಯಿತು. ಮುಖ್ಯಮಂತ್ರಿ ಆದಾಗಿನಿಂದಲೂ ನನಗೆ ಉಸಿರಾಡಲೂ ಸಮಯ ಸಿಗುತ್ತಿಲ್ಲ. ಮುಖ್ಯಮಂತ್ರಿ ಆದ ತಕ್ಷಣವೇ ವಿಪಕ್ಷದವರು ಬಂದ್ ಮಾಡಿದರು’ ಎಂದು ಸಿಎಂ ಕುಮಾರಸ್ವಾಮಿ ನ್ಯಾಷನಲ್ ಕಾಲೇಜ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.