Select Your Language

Notifications

webdunia
webdunia
webdunia
webdunia

ದಾಖಲೆ ಇಲ್ಲದೆ ಸಾಗಿಸ್ತಿದ್ದ ಹಣ ಪತ್ತೆ

Money being transported without documents was found
bangalore , ಶುಕ್ರವಾರ, 28 ಏಪ್ರಿಲ್ 2023 (19:36 IST)
ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಆರ್ ಟಿ ನಗರ ಟಿವಿ ಟವರ್ ಸಮೀಪದ ಚೆಕ್ ಪೋಸ್ಟ್ ಬಳಿ ಪತ್ತೆಯಾಗಿದೆ.ಚುನಾವಣಾ ಅಧಿಕಾರಿಗಳ ಪರಿಶೀಲನೆ ವೇಳೆ ಹತ್ತು ಲಕ್ಷ ಹಣ ಪತ್ತೆಯಾಗಿದ್ದು,ಬೆನ್ಜ್ ಕಾರಿನಲ್ಲಿ‌ ಸಾಗಿಸುತ್ತಿದ್ದ ಮೊಹಮ್ಮದ್ ಷರೀಫ್, ಮಹಮ್ಮದ್ ಯುನೂಸ್ ಎಂಬುವರ ಕಾರಿನಲ್ಲಿ ಹಣ ಪತ್ತೆಯಾಗಿದೆ.
 
ವಾಹನ ತಪಾಸಣೆ ವೇಳೆ ಬೆನ್ಜ್ ಕಾರು ತಡೆದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಹತ್ತು ಲಕ್ಷ ನಗದು ಹಣಕ್ಕೆ ಯಾವುದೇ ದಾಖಲೆ ಇಲ್ಲದೇ ಇರೋದು ಪತ್ತೆ ಯಾಗಿತ್ತು.ಕಾರಿನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ಹಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ.ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ಶೋ ನಡೆಸ್ತಿರೋದಾಗಿ  ಕಾರಿನ ಮಾಲೀಕ ಹೇಳಿದ್ದಾರೆ.ಇನ್ನು ಹಣ ವಶಪಡಿಸಿಕೊಂಡು ಆರ್ ಟಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತ ಪ್ರಚಾರ