Publish Date: Fri, 28 Apr 2023 (18:50 IST)
Updated Date: Fri, 28 Apr 2023 (19:23 IST)
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ಗೆ ಜನರೇ ದುಡ್ಡು ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ಚಿತ್ರದುರ್ಗದ ಒನಕೆ ಓಬವ್ವ ಸ್ಟೇಡಿಯಂಗೆ ಮತಯಾಚನೆಗೆ ತೆರಳುತ್ತಿದ್ದ ವೇಳೆ ಕೆಫೆ ಒಂದರಲ್ಲಿ ಕಾಫಿ ಕುಡಿಯುತ್ತಿದ್ದರು. ಅದೇ ಕೆಫೆಯಲ್ಲಿ ಕಾಫಿ ಕುಡಿಯುತ್ತಿದ್ದ ಜನರು ಆತ್ಮೀಯವಾಗಿ ಮಾತನಾಡಿಸಿ, ಚಿತ್ರದುರ್ಗದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ, ಕಳಪೆ ಕಾಮಗಾರಿ ರಾರಾಜಿಸುತ್ತಿದೆ, ನೀವು ಎಂಎಲ್ ಸಿ ಆಗಿದ್ದಾಗ ಕಮಿಷನ್ ರಹಿತ ಸೇವೆ ಮಾಡಿದ್ದೀರಿ, ಹೀಗಾಗಿ ನಾವೇ ನಿಮಗೆ ದುಡ್ಡು ಕೊಟ್ಟು ಓಟನ್ನೂ ಕೊಡುತ್ತೇವೆ, ನಿಮ್ಮಂತವರು ಅಧಿಕಾರಕ್ಕೆ ಬರಬೇಕು ಎಂದು ಹೇಳಿ ಹಣ ಕೊಟ್ಟು ಪ್ರೋತ್ಸಾಹ ನೀಡಿದ್ದು, ಅಭ್ಯರ್ಥಿ ರಘು ಆಚಾರ್ ಗೆ ಆನೆ ಬಲ ಬಂದಂತಾಗಿದೆ.