Select Your Language

Notifications

webdunia
webdunia
webdunia
webdunia

ಚಾಮರಾಜನಗರದಲ್ಲಿ ಅಕ್ರಮ ಮದ್ಯ ವಶ

ಚಾಮರಾಜನಗರದಲ್ಲಿ ಅಕ್ರಮ ಮದ್ಯ ವಶ
ಚಾಮರಾಜನಗರ , ಶುಕ್ರವಾರ, 28 ಏಪ್ರಿಲ್ 2023 (18:10 IST)
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಹೊರವಲಯದ ಪೆಟ್ರೋಲ್​​​​ ಬಂಕ್​​​ ಬಳಿ ಅಕ್ರಮವಾಗಿ ಬಸ್​​​ನಲ್ಲಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.. 50 ಸಾವಿರ ಮೌಲ್ಯದ ಮದ್ಯ, ಮದ್ಯ ಸಾಗಿಸುತ್ತಿದ್ದ ಬಸ್​​ ಹಾಗೂ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳ ಹದ್ದಿನ ಕಣ್ಣಿನ ನಡುವೆಯೂ ಈ ಚಾಲಾಕಿಗಳು ಅಕ್ರಮವಾಗಿ ಮದ್ಯ ಸಾಗಾಟ ಮಾಡ್ತಿದ್ರು.. ಬಸ್​​ ಚಾಲಕ ಸೆಲ್ವಕುಮಾರ್​​​ ಹಾಗೂ ಬಸ್​​ ಕಂಡಕ್ಟರ್​ ಕೆ. ರಾಜಕುಮಾರ್​​​ ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾವನ ಪರ ಸಿದ್ದು ಸೊಸೆ ಪ್ರಚಾರ