Publish Date: Tue, 07 Mar 2023 (15:46 IST)
Updated Date: Tue, 07 Mar 2023 (15:49 IST)
ಪುತ್ರನ ಲಂಚ ಪ್ರಕರಣದಲ್ಲಿ A1 ಆರೋಪಿಯಾಗಿರುವ KSDL ಮಾಜಿ ಚೇರ್ಮನ್ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ ಆರು ದಿನಗಳಿಂದ ಕೈಗೆ ಸಿಗದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಬಂಧನಕ್ಕೆ ಲೋಕಾಯುಕ್ತ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಇನ್ನು ಈ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ತನಿಖಾಧಿಕಾರಿಗಳ ಬದಲಾವಣೆಯಾಗಿದೆ. ಕೇವಲ 4 ದಿನಕ್ಕೆ ಪ್ರಕರಣದ ಇಬ್ಬರು ತನಿಖಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದ್ದು, ಆದೇಶ ಹೊರಡಿಸಿದ್ಧಾರೆ. ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಬದಲಾವಣೆ ಮಾಡಲು ಆದೇಶಿಸಿದ್ಧಾರೆ. ಇನ್ಸ್‌ಪೆಕ್ಟರ್ ಪ್ರಮೋದ್ ಹಾಗೂ DySP ಅಂಥೋಣಿ ಜಾನ್ರನ್ನು ನೇಮಕ ಮಾಡಿದ್ದಾರೆ. ಟ್ರ್ಯಾಪ್ ಮಾಡಿದ ಅಧಿಕಾರಿ ತನಿಖಾಧಿಕಾರಿಯಾಗಿ ಮುಂದುವರೆಯೋ ಹಾಗಿಲ್ಲ. ಹೀಗಾಗಿ ಲೋಕಾಯುಕ್ತ ತನಿಖಾಧಿಕಾರಿಗಳನ್ನ ಬದಲಾವಣೆ ಮಾಡಿದೆ. ಲೋಕಾಯುಕ್ತ ನಿಯಮಾನುಸಾರ ತನಿಖಾಧಿಕಾರಿ ಬದಲಾವಣೆಯಾಗಿದೆ.
geetha
Publish Date: Tue, 07 Mar 2023 (15:46 IST)
Updated Date: Tue, 07 Mar 2023 (15:49 IST)