Select Your Language

Notifications

webdunia
webdunia
webdunia
webdunia

ಗ್ರಾಹಕರ ಸೋಗಿನಲ್ಲಿ ಮೊಬೈಲ್ ಕಳ್ಳತನ

crime news

geetha

bangalore , ಮಂಗಳವಾರ, 20 ಫೆಬ್ರವರಿ 2024 (15:30 IST)
ಬೆಂಗಳೂರು-ನಗರದಲ್ಲಿ ಗ್ರಾಹಕರ ಸೋಗಿನಲ್ಲಿ ಮೊಬೈಲ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನ ಜ್ಞಾನಭಾರತಿ ಪೊಲೀಸರು ಬಂಧನ ಮಾಡಿದ್ದಾರೆ.ಶಿವರಾಜ್ ಹಾಗೂ ನವೀನ್ ಬಂಧಿತ ಆರೋಪಿಗಳಾಗಿದ್ದು,ಬಂಧಿತರಿಂದ 11 ಲಕ್ಷ ಮೌಲ್ಯದ 41 ಮೊಬೈಲ್, 5 ಬೈಕ್ ವಶಕ್ಕೆ ಪಡೆಯಲಾಗಿದೆ.ಜ್ಞಾನಭಾರತಿ, ಕುಂಬಳಗೋಡು, ಬೇಗೂರು ವ್ಯಾಪ್ತಿಯಲ್ಲಿ ಆರೋಪಿ ಕಳ್ಳತನ ಮಾಡಿದ್ದ ಅಲ್ಲದೇ ನಗರದ ಹಲವು ಅಂಗಡಿಗಳಲ್ಲಿ ಮೊಬೈಲ್ ಕಳ್ಳತನ ಮಾಡಿದ್ದ.ಗ್ರಾಹಕರಂತೆ ಶೋರೂಂಗಳಿಗೆ ಅಸಾಮಿಗಳು ತೆರಳುತ್ತಿದ್ದರು ಈ ವೇಳೆ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡಲು ಕದ್ದ ಬೈಕ್ ಬಳಕೆ ಮಾಡಿಕೊಂಡಿದ್ದಾರೆ.
 
ಹ್ಯಾಂಡಲ್ ಲಾಕ್ ಮುರಿದು ಬೈಕ್ ಕಳ್ಳತನ ಮಾಡಿದ್ದು,ಈ ಹಿಂದೆ ಬಟ್ಟೆ ಅಂಗಡಿ ಆರೋಪಿಗಳು ಇಟ್ಟಿದ್ದರು.ಕೊರೊನಾ ಸಂದರ್ಭದಲ್ಲಿ ಬಟ್ಟೆ ಅಂಗಡಿ ಲಾಸ್ ಆಗಿತ್ತು ಹೀಗಾಗಿ ಆರೋಪಿಗಳು ಮೊಬೈಲ್ ಕಳ್ಳತನಕ್ಕಿಳಿದಿದ್ದರು ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರನ್ನು ಸಖತ್ತಾಗಿ ಅಣಕಿಸಿದ ಸಿಎಂ