Select Your Language

Notifications

webdunia
webdunia
webdunia
webdunia

ಬೋಸರಾಜು ಸಭೆಗೆ ‘ಕೈ’ ಕೊಟ್ಟ ಶಾಸಕರು

ಬೋಸರಾಜು ಸಭೆಗೆ ‘ಕೈ’ ಕೊಟ್ಟ ಶಾಸಕರು
ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಗೆ ಕಾಂಗ್ರೆಸ್ ಶಾಸಕರೆಲ್ಲ ಗೈರಾಗಿದ್ದಾರೆ. ಜಿಲ್ಲಾ ಮಂತ್ರಿ N.S ಭೋಸರಾಜ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಿಲ್ಲಾ ಮಂತ್ರಿಗಳ ಪ್ರಥಮ ಸಭೆಗೆ ಜಿಲ್ಲೆಯ 7 ಶಾಸಕರು ಹಾಜರಾಗಿಲ್ಲ.. ಕಾಂಗ್ರೆಸ್ ಪಕ್ಷದ ನಾಲ್ವರು ಶಾಸಕರು ಸೇರಿ ಬಿಜೆಪಿ, ಜೆಡಿಎಸ್ ಶಾಸಕರು ಸಹ ಗೈರಾಗಿದ್ದಾರೆ. ಬೋಸರಾಜು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರಲ್ಲ. ಆದರೂ ಅವರನ್ನು ಮಂತ್ರಿ ಮಾಡಿದ್ದು, ಕಾಂಗ್ರೆಸ್​ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಶಾಸಕರು ಸಚಿವ ಭೋಸರಾಜು ಮೊದಲ ಸಭೆಗೆ ಗೈರು ಹಾಜರಾಗಿ ಶಾಕ್​ ಕೊಟ್ಟಿದ್ದಾರೆ.. ಕಾಂಗ್ರೆಸ್ ಶಾಸಕರ ಗೈರು ಹಿನ್ನೆಲೆ ಸಚಿವ ಭೋಸರಾಜುಗೆ ಭಾರಿ ಮುಜುಗರವಾಗಿದೆ. ಸಿಂಧನೂರು, ಮಾನವಿ, ಮಸ್ಕಿ ಹಾಗೂ ರಾಯಚೂರು ಗ್ರಾಮೀಣ ಕಾಂಗ್ರೆಸ್​ ಶಾಸಕರು ಸಭೆಗೆ ಗೈರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರಣ್ಯ ಇಲಾಖೆ ಅಧಿಕಾರಿ ಮೇಲೆ ಡಿಕೆಶಿ ಗರಂ