Publish Date: Sun, 01 Oct 2023 (15:23 IST)
Updated Date: Sun, 01 Oct 2023 (15:10 IST)
ಮುಸ್ಲಿಂರನ್ನು ನಂಬಿ ನಾನು ರಾಜಕಾರಣ ಮಾಡುತ್ತಿಲ್ಲ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ, ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ ಜೆ.ಹೆಚ್.ಪಟೇಲ್ರು ಮುಖ್ಯಮಂತ್ರಿಯಾಗಿದ್ದಾಗ, ವಿಪಕ್ಷದವರು ಸರ್ಕಾರ ಬೀಳುತ್ತೆ ಅಂತಾ ಟೀಕೆ ಮಾಡುತ್ತಿದ್ದರು. ಹೋರಿ ಹೋಗುತ್ತಿರುತ್ತದೆ, “ನಾಯಿ ಹಿಂದೆ ಬೆನ್ನು ಹತ್ತಿರುತ್ತದೆ. ಹೋರಿ ಯಾವಾಗ ಬೀಳುತ್ತೆ, ಆಗ ಅದನ್ನ ತಿನ್ನಬೇಕು ಅಂತ ನಾಯಿ ಕಾಯುತ್ತಿರುತ್ತದೆ.ಎಂದು ಬಹಳ ಮಾರ್ಮಿಕವಾಗಿ ಹೇಳಿದ್ದರು”. ಇದನ್ನು ಜೆ.ಹೆಚ್. ಪಟೇಲ್ರು ಹೇಳಿದ್ದು ನಾನಲ್ಲ. ಈಗಲೂ ಹಾಗೇಯೇ ಆಗುತ್ತಿದೆ ಅಂತ ಸವದಿ ಪರೋಕ್ಷವಾಗಿ ಹೆಚ್ಡಿ ಕುಮಾರಸ್ವಾಮಿಯವರನ್ನು ನಾಯಿಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ.