Publish Date: Wed, 27 Sep 2023 (16:46 IST)
Updated Date: Wed, 27 Sep 2023 (16:48 IST)
ಸರ್ಕಾರ ಕಾವೇರಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ವಪಕ್ಷ ಸಭೆಯಲ್ಲಿ ಕೊಟ್ಟ ಸಲಹೆ ಸ್ವೀಕರಿಸಿಲ್ಲ, ನಾವು ಬಿಜೆಪಿಯವರು ಜಂಟಿಯಾಗಿ ಹೋರಾಡುತ್ತೇವೆ. ಈ ವಿಚಾರದಲ್ಲಿ ರಾಜಕಾರಣವನ್ನ ನಾವು ಮಾಡಲ್ಲ. ಸರ್ಕಾರ ನಿರ್ಲಕ್ಷ್ಯದಿಂದ ನಿರ್ವಹಣೆ ಮಾಡುತ್ತಿದೆ. ಕೂಡಲೇ ಸುಪ್ರೀಂಕೋರ್ಟ್‌ಗೆ ಹೋಗಬೇಕಿತ್ತು. ಸುಪ್ರೀಂ ತೀರ್ಪು ಬರೋವರೆಗೂ ಇವರು ಸುಮ್ಮನಿದ್ರು. ನೀರಾವರಿ ಸಚಿವರು ಉಡಾಫೆಯಿಂದ ಹೇಳಿಕೆ ಕೊಡ್ತಾರೆ ಎಂದ್ರು.