Select Your Language

Notifications

webdunia
webdunia
webdunia
webdunia

ಯಾವತ್ತಾದ್ರೂ ಬಿಟ್ಟು ಕೊಡಲೇ ಬೇಕಾಲ್ವ, ಸಿಎಂ ಆಪ್ತ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

satish jarakiholi

Sampriya

ಬೆಂಗಳೂರು , ಬುಧವಾರ, 3 ಡಿಸೆಂಬರ್ 2025 (12:00 IST)
ಬೆಂಗಳೂರು: ಡಿಕೆ ಶಿವಕುಮಾರ್ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಸವಿದ ಬಳಿಕ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಪಕ್ಕಾ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. 

ಇದೀಗ ಈ ಸಂಬಂಧ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕೀಹೊಳಿ ಅವರು ಪ್ರತಿಕ್ರಿಯಿಸಿದ್ದಾರೆ. 

ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಅವಧಿಗೂ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಬಹುದು. ಅದೆಲ್ಲ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾವತ್ತೂ ಆದ್ರೂ ಬಿಡಲೇ ಬೇಕಾಲ್ವ. ಯಾವಾಗ ಅಂತ ಹೈಕಮಾಂಡ್ ಹಾಗೂ ವರಿಷ್ಠರಿಗೆ ತಿಳಿದಿದೆ. 

ಇನ್ನೂ ಈ ವಿಚಾರವನ್ನು ಹೈಕಮಾಂಡ್ ಯಾವಾ ರೀತಿ ಬಗೆಯಹರಿಸುತ್ತಾರೆಂದು ಗೊತ್ತಿಲ್ಲ. ಕಾರ್ಯಕರ್ತರು ಹಾಗು ಶಾಸಕರಿಗೆ ಪಕ್ಷದೊಳಗೆ ಒಳ್ಳೆಯ ವಾತಾವರಣವಿರಬೇಕು ಅಷ್ಟೇ, ಮುಂದೇನಾಗುತ್ತೆ ಕಾದು ನೋಡಬೇಕೆಂದರು. 

ಇನ್ನೂ ದಲಿತ ಸಿಎಂ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಅವಧಿಯಲ್ಲಿ ಇಲ್ಲ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಈ ತಿಂಗಳೊಳಗೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಪಕ್ಕಾ: ಗೋವಿಂದ ಕಾರಜೋಳ