Publish Date: Fri, 14 Aug 2020 (11:24 IST)
Updated Date: Fri, 14 Aug 2020 (11:26 IST)
ಬೆಂಗಳೂರು : ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ SDPI ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, SDPI ಬಗ್ಗೆ ಸಾಕಷ್ಟು ಮಾಹಿತಿ ಬಹಿರಂಗವಾಗಿದೆ. SDPI ನಿಷೇಧಿಸುವಂತೆ ಎಲ್ಲೆಡೆ ಕೂಗು ಕೇಳಿ ಬಂದಿದೆ. ಇದು ಎಲ್ಲರ ಸರ್ವಸಮ್ಮತಿ ಬೇಡಿಕೆಯಾಗಿದೆ. SDPI ಬ್ಯಾನ್ ಗೆ ನಾನೂ ಬೆಂಬಲಿಸುವೆ. SDPI ನಿಷೇಧಕ್ಕೆ ಸೂಕ್ತ ಸಮಯ ಬಂದಿದೆ. ಕೇಂದ್ರದ ಜೊತೆ ಸರ್ಕಾರ ಈ ಬಗ್ಗೆ ಚರ್ಚಿಸಲಿದೆ ಎಂದು ತಿಳಿಸಿದ್ದಾರೆ.