Select Your Language

Notifications

webdunia
webdunia
webdunia
webdunia

ಆರೋಗ್ಯಕರವಾದ ಬಾದಾಮಿ ಚಟ್ನಿ

ಆರೋಗ್ಯಕರವಾದ ಬಾದಾಮಿ ಚಟ್ನಿ
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (09:38 IST)
ಬೆಂಗಳೂರು : ಬಾದಾಮಿ ಆರೋಗ್ಯಕ್ಕೆ ಉತ್ತಮ. ಇದರಿಂದ ತಯಾರಿಸುವ ಚಟ್ನಿ ತುಂಬಾ ರುಚಿಕರವಾಗಿರುತ್ತದೆ. ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ನೆನೆಸಿಟ್ಟ ಬಾದಾಮಿ, ಸ್ವಲ್ಪ ಕೊತ್ತಂಬರಿ ಸೊಪ್ಪು,  3 ಹಸಿಮೆಣಸಿನ ಕಾಯಿ, 5-6 ಕರಿಬೇವು, ½ ಇಂಚು ಶುಂಠಿ, ಹುಣಸೆಹಣ್ಣು, ಸ್ವಲ್ಪ ಬೆಲ್ಲ, ಉಪ್ಪು, 1 ಚಮಚ ಎಣ್ಣೆ, 1 ಚಮಚ ಸಾಸಿವೆ, ಚಟಿಕೆ ಇಂಗು.

ಮಾಡುವ ವಿಧಾನ :  ಬಾದಾಮಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ, ಕರಿಬೇವು, ಶುಂಠಿ, ಹುಣಸೆಹಣ್ಣು, ಬೆಲ್ಲ, ಉಪ್ಪು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ ಒಗ್ಗರಣೆ ಹಾಕಿ ಅದನ್ನು ಈ ಚಟ್ನಿಗೆ ಮಿಕ್ಸ್ ಮಾಡಿದರೆ ಬಾದಾಮಿ ಚಟ್ನಿ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ತಲೆನೋವನ್ನು ನಿವಾರಿಸಲು ಈ ಎಣ್ಣೆಗಳಿಂದ ಮಸಾಜ್ ಮಾಡಿ