Select Your Language

Notifications

webdunia
webdunia
webdunia
webdunia

ಅಬಕಾರಿ ಸಚಿವ ತಿಮ್ಮಾಪುರ ಆಪ್ತನಿಂದ ಬ್ರಹ್ಮಾಂಡ ಭ್ರಷ್ಟಾಚಾರ: ಲೈಸೆನ್ಸ್ ಗಾಗಿ ನಡೆಯುತ್ತಿತ್ತು ಕೋಟಿಗಟ್ಟಲೆ ವ್ಯವಹಾರ

RB Thimmapur

Krishnaveni K

ಬೆಂಗಳೂರು , ಗುರುವಾರ, 7 ನವೆಂಬರ್ 2024 (09:56 IST)
ಬೆಂಗಳೂರು: ಈಗಷ್ಟೇ ಮುಡಾ ಹಗರಣ, ವಾಲ್ಮೀಕಿ ಹಗರಣದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರ ನಡುವೆ ಈಗ ಅಬಕಾರಿ ಇಲಾಖೆಯಲ್ಲೂ ಹಗರಣ ಆರೋಪ ಕೇಳಿಬಂದಿದ್ದು ರಾಜ್ಯಪಾಲರಿಗೆ ಇಲಾಖೆಯ ಅಧಿಕಾರಿಗಳೇ ದೂರು ನೀಡಿದ್ದಾರೆ ಎನ್ನಲಾಗಿದೆ.

ನಿನ್ನೆಯಷ್ಟೇ ವಿಪಕ್ಷ ನಾಯಕ ಆರ್ ಅಶೋಕ್,  ಅಬಕಾರಿ ಸಚಿವ ತಿಮ್ಮಾಪುರ ಅಣತಿಯಂತೆ ಪ್ರತೀ ವಾರ ತಲಾ 20 ಸಾವಿರ ರೂ.ಗಳಂತೆ 18 ಕೋಟಿ ರೂ.ಗಳಂತೆ ಮದ್ಯದಂಗಡಿಗಳ ಮಾಲಿಕರಿಂದ ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಮದ್ಯದಂಗಡಿ ಮಾಲಿಕರು ದೂರು ಕೂಡಾ ನೀಡಿದ್ದರು ಎಂದಿದ್ದರು.

ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಅಬಕಾರಿ ಇಲಾಖೆ ಅಧಿಕಾರಿಯೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಅಬಕಾರಿ ಸಚಿವ ತಿಮ್ಮಾಪುರ ಮತ್ತು ಅವರ ಆಪ್ತ ಜೀವನ್ ಶೆಟ್ಟಿ  ವಿರುದ್ಧ ದೂರು ನೀಡಲಾಗಿದೆ. ಮುಖ್ಯವಾಗಿ ಜೀವನ್ ಶೆಟ್ಟಿಯಿಂದಲೇ ಅಕ್ರಮ ನಡೆಯುತ್ತಿದೆ ಎನ್ನಲಾಗಿದೆ.

ಸಿಎಲ್-2 ಲೈಸೆನ್ಸ್ ಕೊಡಿಸುತ್ತೇನೆಂದು ಬಾರ್ ಮಾಲಿಕರಿಂದ ಕೋಟ್ಯಾಂತರ ರೂಪಾಯಿ ವಸೂಲಿ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಯಾರಿಗೂ ಲೈಸೆನ್ಸ್ ಕೊಡಿಸಿಲ್ಲ. ಕೇಳಲು ಹೋದರೆ ಸಚಿವ ತಿಮ್ಮಾಪುರಗೆ ಹಣ ಕೊಟ್ಟಿದ್ದೇನೆ ಎನ್ನುತ್ತಾನೆ ಎಂದು ದೂರಲಾಗಿದೆ.

ಬಾರ್ ಮಾಲಿಕರೂ ಜೀವನ ಶೆಟ್ಟಿ ವಿರುದ್ಧ ಲಂಚ ಪಡೆದ ಆರೋಪ ಮಾಡುತ್ತಿದ್ದಾರೆ. 10 ಲಕ್ಷ ರೂ.ಗಳಿಂದ 25 ಲಕ್ಷ ರೂ.ವರೆಗೆ ಪರವಾನಗಿ ಕೊಡಿಸಲು, ವರ್ಗಾವಣೆಗೆ 40 ರಿಂದ 50 ಲಕ್ಷ ರೂ. ವಸೂಲಿ ಮಾಡಿದ್ದಾನೆ. ಕೇಳಲು ಹೋದರೆ ಧಮ್ಕಿ ಹಾಕುತ್ತಾನೆ ಎಂದು ಬಾರ್ ಮಾಲಿಕರು ಅಳಲು ತೋಡಿಕೊಂಡಿದ್ದಾರೆ. ಉಪಚುನಾವಣೆ ಹೊಸ್ತಿಲಲ್ಲಿ ಸರ್ಕಾರಕ್ಕೆ ಈಗ ಮತ್ತೊಂದು ಮುಜುಗರ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮೊಮ್ಮಗನಿಂದ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ: ದೇವೇಗೌಡರಿಗೆ ಸಿದ್ದರಾಮಯ್ಯ ಗುದ್ದು