Select Your Language

Notifications

webdunia
webdunia
webdunia
webdunia

ಇ ಶ್ರಮ್ ನೊಂದಾಯಿತ ಕಾರ್ಮಿಕರಿಗೆ ಗುಡ್ ನ್ಯೂಸ್: ರೇಷನ್ ಕಾರ್ಡ್ ಪಡೆದುಕೊಳ್ಳಲು ಹೀಗೆ ಮಾಡಿ

Ration card

Krishnaveni K

ಬೆಂಗಳೂರು , ಗುರುವಾರ, 7 ನವೆಂಬರ್ 2024 (08:47 IST)
ಬೆಂಗಳೂರು: ರಾಜ್ಯ ಸರ್ಕಾರ ಇ ಶ್ರಮ್ ನೊಂದಾಯಿತ ಅರ್ಹ ಕಾರ್ಮಿಕರಿಗೆ ರೇಷನ್ ಕಾರ್ಡ್ ಪಡೆಯಲು ಆಹಾರ ಮತ್ತು ನಾಗರಿಕ ಸೇವಾ ಇಲಾಖೆ ಅವಕಾಶ ನೀಡಿದೆ. ಅರ್ಹ ಕಾರ್ಮಿಕರಿಗೆ ಪಡಿತರ ಚೀಟಿ ವಿತರಿಸಲು ಆರಂಭಿಸಿದೆ.

ಅರ್ಹ ಇ ಶ್ರಮ್ ಕಾರ್ಮಿಕರಿಗೆ ಆಹಾರ ಮತ್ತು ನಾಗರಿಕಾ ಇಲಾಖೆಯಿಂದ ಆದ್ಯತಾ ಪಡಿತರ ಚೀಟಿ ಸಿಗಲಿದೆ. ಇದನ್ನು ನಿಮ್ಮ ಹತ್ತಿರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಸಂಪರ್ಕಿಸಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ  ಟೋಲ್ ಫ್ರೀ ನಂಬರ್ 18004259339 ಅಥವಾ ಸಹಾಯವಾಣಿ 1967 ಕ್ಕೆ ಬೆಳಿಗ್ಗೆ 10 ರಿಂದ ಸಂಜೆ 5.30 ರೊಳಗಾಗಿ ಕರೆ ಮಾಡಬಹುದಾಗಿದೆ.

ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ಸಿಗುವ ಸೌಲಭ್ಯಗಳೇನು
ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಒಂದು ಕುಟುಂಬವು ಪ್ರತೀ ವ್ಯಕ್ತಿಗೆ 5 ಕಿ.ಗ್ರಾಂನಂತೆ ಒಂದು ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಈ ಪಡಿತರ ಚೀಟಿ ಹೊಂದಿದವರಿಗೆ ಅಕ್ಕಿ ಪ್ರತೀ ಕೆ.ಜಿಗೆ 3 ರೂ., ಗೋಧಿ 2 ರೂ.ಗಳಿಗೆ ಸಿಗುತ್ತದೆ. ಈ ಬೆಲೆಯನ್ನು ಕಾಲ ಕಾಲಕ್ಕೆ ಪರಿಷ್ಕರಿಸಲಾಗುತ್ತದೆ.

ಸರ್ಕಾರವು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಇರುವವರಿಗೆ ಆದ್ಯತಾ ಪಡಿತರ ಚೀಟಿ ವಿತರಿಸಲಾಗುತ್ತಿದೆ. ತಕ್ಷಣವೇ ಇದನ್ನು ಪಡೆದುಕೊಂಡು ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದಲ್ಲಿ ಟ್ರಂಪ್‌ ಜಯಿಸುತ್ತಿದ್ದಂತೆ ಡಾಲರ್‌ ಚೇತರಿಕೆ, ರೂಪಾಯಿ ಸೇರಿದಂತೆ ವಿವಿಧ ಕರೆನ್ಸಿ ಕುಸಿತ