Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಟ್ರಂಪ್‌ ಜಯಿಸುತ್ತಿದ್ದಂತೆ ಡಾಲರ್‌ ಚೇತರಿಕೆ, ರೂಪಾಯಿ ಸೇರಿದಂತೆ ವಿವಿಧ ಕರೆನ್ಸಿ ಕುಸಿತ

Donald Trump

Sampriya

ನವದೆಹಲಿ , ಬುಧವಾರ, 6 ನವೆಂಬರ್ 2024 (19:06 IST)
Photo Courtesy X
ನವದೆಹಲಿ:  ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಬಾರಿ ಗೆಲುವು ದಾಖಲಿಸಿರುವುದಾಗಿ ಘೋಷಿಸುತ್ತಿದ್ದಂತೆ, ಭಾರತದ ರೂಪಾಯಿ ಸೇರಿದಂತೆ ವಿವಿಧ ರಾಷ್ಟ್ರಗಳ ಕರೆನ್ಸಿಗಳ ಮೌಲ್ಯ ದಾಖಲೆಯ ಕುಸಿತ ಕಂಡಿವೆ.

ರೂಪಾಯಿ ಮೌಲ್ಯವು ಕಳೆದ ನಾಲ್ಕು ತಿಂಗಳ ಕನಿಷ್ಠಕ್ಕೆ ಕುಸಿದಿದೆ. ಹಿಂದಿನ ದರಕ್ಕಿಂತ ಶೇ 0.2ರಷ್ಟು ಕುಸಿತ ದಾಖಲಿಸಿರುವ  ಭಾರತದ ರೂಪಾಯಿ, ಬುಧವಾರ ಪ್ರತಿ ಡಾಲರ್‌ಗೆ ₹84.28ರಷ್ಟು ದಾಖಲಿಸಿದೆ.

2024ರ ಅಮೆರಿಕದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ವಿರುದ್ಧ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಿಜಯ ಸಾಧಿಸಿದ್ದಾರೆ ಎಂದು ಫಾಕ್ಸ್‌ ನ್ಯೂಸ್‌ ಈಗಾಗಲೇ ಘೋಷಿಸಿದೆ. ಆದರೆ ಉಳಿದ ಮಾಧ್ಯಮಗಳು ಇನ್ನಷ್ಟೇ ಫಲಿತಾಂಶ ಪ್ರಕಟಿಸಬೇಕಿದೆ. ಇದರ ಬೆನ್ನಲ್ಲೇ ಡಾಲರ್‌ ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ.

ಡಾಲರ್‌ ಮೌಲ್ಯವು ಶೇ 1.5ರಷ್ಟು ಹೆಚ್ಚಳವಾಗಿದೆ. ಮತ್ತೊಂದೆಡೆ ಚೀನಾದ ಯಾನ್‌ ಶೇ 1.1ರಷ್ಟು ಕುಸಿದಿದೆ. ಒಂದೊಮ್ಮೆ ಯಾನ್‌ ತ್ವರಿತವಾಗಿ ಪ್ರತಿಕ್ರಿಯಿಸಿದರೆ, ಆರ್‌ಬಿಐ ದುತ್ತನೆ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಲಿದೆ. ಆದರೆ ಸದ್ಯಕ್ಕೆ ರೂಪಾಯಿ ದುರ್ಬಲವಾಗಲು ಕೇಂದ್ರೀಯ ಬ್ಯಾಂಕ್‌ ಬಿಡುವ ಸಾಧ್ಯತೆಯೇ ಹೆಚ್ಚು ಎಂದಿದ್ದಾರೆ.

ಆಮದು ವಸ್ತುಗಳ ಮೇಲೆ ಶೇ 10ರಷ್ಟು ಹಾಗೂ ಚೀನಾದ ವಸ್ತುಗಳ ಮೇಲೆ ಶೇ 60ರಷ್ಟು ಆಮದು ಶುಲ್ಕ ವಿಧಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್‌ ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು. ಟ್ರಂಪ್ ಅವರ ಮಾತಿನಂತೆಯೇ ವಲಸೆ ನೀತಿ, ತೆರಿಗೆ ಪದ್ಧತಿ ಹಾಗೂ ಸುಂಕ ಬದಲಾವಣೆ ನೀತಿ ಜಾರಿಗೆ ಬಂದಿದ್ದೇ ಆದಲ್ಲಿ, ಅಮೆರಿಕದಲ್ಲಿ ಹಣದುಬ್ಬರ ಪ್ರಮಾಣ ಏರಿಕೆಯಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗೇಶ್ವರ್‌ಗೆ ಜನರ ಕಷ್ಟ ಗೊತ್ತು, ಆದ್ರೆ ದೇವೇಗೌಡರ ಕುಟುಂಬಕ್ಕೆ ಗೊತ್ತಿರುವುದು ಅಳುವುದಷ್ಟೇ: ಸಿದ್ದರಾಮಯ್ಯ