Publish Date: Thu, 02 Nov 2017 (13:43 IST)
Updated Date: Thu, 02 Nov 2017 (13:46 IST)
ಕಲಬುರ್ಗಿ: ಅಧಿಕಾರದಲ್ಲಿದ್ದಾಗಲೇ ಬಿಜೆಪಿಯವರಿಂದ ಯಾವುದೇ ಪರಿವರ್ತನೆ ಮಾಡಲು ಸಾಧ್ಯವಾಗಲಿಲ್ಲ. ಅಂತಹವರು ಈಗೇನು ಪರಿವರ್ತನೆ ಮಾಡ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಅಧಿಕಾರದಲ್ಲಿದ್ದಾಗಲೇ ಏನೂ ಪರಿವರ್ತನೆ ಮಾಡಲಿಲ್ಲ. ರಾಜ್ಯದ ಅಭಿವೃದ್ದಿ ಬಗ್ಗೆ ಕಾಳಜಿ ತೋರಲಿಲ್ಲ. ಅಭಿವೃದ್ಧಿ ಯೋಜನೆಗಳು ರೂಪಿಸಲಿಲ್ಲ. ಆದ್ರೆ ಈಗ ಬಿಜೆಪಿ ನಾಯಕರಿಗೆ ಜ್ಞಾನೋದಯವಾಗಿದೆ. ರಾಜ್ಯದ ಜನರ ಬಗ್ಗೆ ಒಮ್ಮಿಂದೊಮ್ಮೆಲೆ ಕಾಳಜಿ ಮೂಡಿದ್ದು ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲಿ ಎರಡು ಮೂರು ಬಣಗಳಿವೆ. ಅವುಗಳನ್ನು ಇವರಿಂದ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವರು ರಾಜ್ಯವನ್ನೇನು ಪರಿವರ್ತನೆ ಮಾಡ್ತಾರೆ ಎಂದರು.