Select Your Language

Notifications

webdunia
webdunia
webdunia
webdunia

ಬಿಎಸ್‌ವೈ, ಅಮಿತ್ ಶಾ ಜೈಲು ಗಿರಾಕಿಗಳು, ಪರಿವರ್ತನೆ ಹೇಗೆ ಸಾಧ್ಯ: ಸಿಎಂ

ಬಿಎಸ್‌ವೈ, ಅಮಿತ್ ಶಾ ಜೈಲು ಗಿರಾಕಿಗಳು, ಪರಿವರ್ತನೆ ಹೇಗೆ ಸಾಧ್ಯ: ಸಿಎಂ
ಬೆಂಗಳೂರು , ಗುರುವಾರ, 2 ನವೆಂಬರ್ 2017 (13:33 IST)
ನವ ಕರ್ನಾಟಕ ಪರಿವರ್ತನೆ ಯಾತ್ರೆ ಅಗತ್ಯವಿಲ್ಲ. ಪರಿವರ್ತನೆಯಾಗಬೇಕಿರುವುದು ಬಿಜೆಪಿ ನಾಯಕರಲ್ಲಿ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿವರ್ತನೆ ಯಾತ್ರೆಯಲ್ಲಿ ಯಡಿಯೂರಪ್ಪ ನಾನು ಜೈಲಿಗೆ ಹೋಗಿದ್ದೆ ನೀವು ಜೈಲಿಗೆ ಹೋಗಿದ್ದೀರಿ ಎಂದು ಅಮಿತ್ ಶಾಗೆ ಹೇಳಬೇಕು. ಕೋಮುಗಲಭೆಗಳ ಮೂಲಕ ಜನತೆಯ ಮನ ಗೆಲ್ಲಲು ಸಾಧ್ಯವಿಲ್ಲ. ರಾಜ್ಯದ ಜನತೆ ಪ್ರಬುದ್ಧರಾಗಿದ್ದಾರೆ. ಆದ್ದರಿಂದ ಪರಿವರ್ತನೆ ರ್ಯಾಲಿಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
 
ರಾಜ್ಯದ ಜನತೆ ಬಿಜೆಪಿಯವರಿಗೆ ಅಧಿಕಾರ ಕೊಟ್ಟು ನೋಡಿದ್ದಾರೆ. ಅಧಿಕಾರದಲ್ಲಿದ್ದಾಗ ಬಿಜೆಪಿಯವರು ರಾಜ್ಯವನ್ನೇ ಲೂಟಿ ಹೊಡೆದರು.ಇದೀಗ ಪರಿವರ್ತನೆಯ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
 
ನವಕರ್ನಾಟಕ ಪರಿವರ್ತನೆ ಯಾತ್ರೆಗೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಇಂತಹವರಿಂದ ಯಾವ ಪರಿವರ್ತನೆ ನಿರೀಕ್ಷಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಹಾಗೆ ಅಧಿಕಾರಕ್ಕಾಗಿ ಬೇರೆ ಪಾರ್ಟಿ ಬಿಟ್ಟು ಮೋದಿ ಪ್ರಧಾನಿಯಾಗಿಲ್ಲ: ಜೋಷಿ