Select Your Language

Notifications

webdunia
webdunia
webdunia
webdunia

ಎಸಿಬಿಯಿಂದ ಯತೀಂದ್ರಗೆ ಕ್ಲೀನ್ ಚಿಟ್: ಸಿಎಂ ಪುತ್ರನಿಗೆ ಬಿಗ್ ರಿಲೀಫ್

ಎಸಿಬಿಯಿಂದ ಯತೀಂದ್ರಗೆ ಕ್ಲೀನ್ ಚಿಟ್: ಸಿಎಂ ಪುತ್ರನಿಗೆ ಬಿಗ್ ರಿಲೀಫ್
ಬೆಂಗಳೂರು , ಗುರುವಾರ, 2 ನವೆಂಬರ್ 2017 (11:17 IST)
ಬೆಂಗಳೂರು: ಎಸಿಬಿಯಿಂದ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಬಿಗ್ ರಿಲೀಫ್ ಸಿಕ್ಕಿದೆ.

ಮ್ಯಾಟ್ರಿಕ್ಸ್ ಇಮೇಜಿಂಗ್ ಕಂಪೆನಿ ಪ್ರಾರಂಭದ ವಿಷಯದಲ್ಲಿ ನೀಡಿದ್ದ ದೂರಿಗೆ ಎಸಿಬಿ ಕ್ಲೀನ್ ಚಿಟ್ ನೀಡಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯೂನಿಟ್ ಆರಂಭಕ್ಕೆ ಟೆಂಡರನ್ನು ನಿಯಮಬಾಹೀರವಾಗಿ ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್ ಆರೋಪ ಮಾಡಿ ದೂರು ನೀಡಿದ್ದರು.

ಆದರೆ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಎಸಿಬಿ ಪ್ರಕರಣವನ್ನು ಖುಲಾಸೆ ಮಾಡಿದೆ. ಸದ್ಯ ಎಸಿಬಿ ಧೋರಣೆಗೆ ಭಾಸ್ಕರನ್ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಹೇಳಿಕೆ ಪಡೆಯದೆ ಪ್ರಕರಣಕ್ಕೆ ಎಸಿಬಿ ತಿಲಾಂಜಲಿ ಇಟ್ಟಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್ ನಲ್ಲಿ ಕಾನೂನು ಸಮರ ಆರಂಭಿಸಲು ಭಾಸ್ಕರನ್ ನಿರ್ಧಾರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಿವರ್ತನಾ ಯಾತ್ರೆಗೆ ಕ್ಷಣಗಣನೆ: ಬಿಐಇಸಿ ಮೈದಾನದಲ್ಲಿ ಸಕಲ ಸಿದ್ಧತೆ