Publish Date: Fri, 27 Oct 2017 (11:01 IST)
Updated Date: Fri, 27 Oct 2017 (11:04 IST)
ನವದೆಹಲಿ: ಛತ್ತೀಸ್ ಘಡ ಬಿಜೆಪಿ ಸರ್ಕಾರ ಸಚಿವರೊಬ್ಬರನ್ನೊಳಗೊಂಡು ಆಕ್ಷೇಪಾರ್ಹ ದೃಶ್ಯಗಳ ಸಿಡಿಯನ್ನು ತೋರಿಸಿ ಹಣಕ್ಕಾಗಿ ಬೆದರಿಸುತ್ತಿದ್ದ ಹಿರಿಯ ಪತ್ರಕರ್ತ ವಿನೋದ್ ವರ್ಮಾರನ್ನು ಪೊಲೀಸರು ಬಂಧಿಸಿದ್ದಾರೆ.
ಸಚಿವರ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ ವಿನೋದ್ ವರ್ಮಾ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಸಚಿವರ ಆಪ್ತರು ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಇದೆಲ್ಲಾ ಬಿಜೆಪಿ ಸರ್ಕಾರದ ಮಾನ ಕಳೆಯಲು ಪ್ರತಿಪಕ್ಷ ಕಾಂಗ್ರೆಸ್ ಮಾಡುತ್ತಿರುವ ತಂತ್ರ ಎಂದು ಬಿಜೆಪಿ ಬಣ್ಣಿಸಿದೆ. ವಿನೋದ್ ವರ್ಮಾ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಬಿಜೆಪಿ ಆರೋಪಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ