Select Your Language

Notifications

webdunia
webdunia
webdunia
webdunia

ಹಾರ್ದಿಕ್ ಪಾಂಡ್ಯರನ್ನು ಹೀಗೆಳೆದ ಪಾಕ್ ಪತ್ರಕರ್ತೆಯ ಬೆವರಿಳಿಸಿದ ಟ್ವಿಟರಿಗರು

ಹಾರ್ದಿಕ್ ಪಾಂಡ್ಯರನ್ನು ಹೀಗೆಳೆದ ಪಾಕ್ ಪತ್ರಕರ್ತೆಯ ಬೆವರಿಳಿಸಿದ ಟ್ವಿಟರಿಗರು
ನವದೆಹಲಿ , ಬುಧವಾರ, 20 ಸೆಪ್ಟಂಬರ್ 2017 (10:45 IST)
ನವದೆಹಲಿ: ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಹೀಗೆಳೆಯಲು ಹೋಗಿ ಪಾಕಿಸ್ತಾನದ ಪತ್ರಕರ್ತೆ ಫಝೀಲಾ ಸಬಾ ಟ್ವಿಟಟಿಗರಿಂದ ಚೆನ್ನಾಗಿ ಜಾಡಿಸಿಕೊಂಡಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟ್ ಮತ್ತು ಬಾಲ್ ನಿಂದ ಭರ್ಜರಿ ಪ್ರದರ್ಶನ ನೀಡಿದ ಮೇಲೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರೂ ಪಾಂಡ್ಯರನ್ನು ಇಂಗ್ಲೆಂಡ್ ನ ಖ್ಯಾತ ಆಲ್ ರೌಂಡರ್ ಕ್ರಿಕೆಟಿಗ ಬೆನ್ ಸ್ಟೋಕ್ ಗೆ ಹೋಲಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ ಸಬಾ ‘ಹಾರ್ದಿಕ್ ಪಾಂಡ್ಯ ಉತ್ತಮ ಆಲ್ ರೌಂಡರ್ ಎನ್ನುವುದೇನೋ ನಿಜ. ಆದರೆ ಭಾರತೀಯ ಮಾಧ್ಯಮಗಳು ಅವರನ್ನು ಪ್ರತಿಭಾವಂತ ಆಲ್ ರೌಂಡರ್ ಬೆನ್ ಸ್ಟೋಕ್ ಜತೆ ಹೋಲಿಸುವುದು ಉತ್ಪ್ರೇಕ್ಷೆಯೆನಿಸುತ್ತದೆ’ ಎಂದಿದ್ದರು. ಜತೆಗೆ ಪಾಂಡ್ಯ ಎಂದು ಬರೆಯುವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ್ದಾರೆ. ಇದು ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ.

ಪಾಂಡ್ಯ ಎಂದು ಸರಿಯಾಗಿ ಸ್ಪೆಲ್ಲಿಂಗ್ ಬರೆಯಲು ಬರದವರು ಅವರ ಬಗ್ಗೆ ಮಾತನಾಡುತ್ತಾರೆ ಎಂದು ಒಬ್ಬಾತ ಕಿಡಿ ಕಾರಿದರೆ, ಇನ್ನೊಬ್ಬರು ಪಾಕಿಸ್ತಾನದಲ್ಲಿ ಇವರಂತಹ ಆಟಗಾರರೇ ಇಲ್ಲ. ಅದಕ್ಕೇ ನಿಮಗೆ ಗೊತ್ತಿಲ್ಲ. ಪಾಂಡ್ಯ ಸ್ಟೋಕ್ ಗಿಂತಲೂ ಬೆಟರ್ ಆಟಗಾರ ಎಂದು ಇನ್ನು ಕೆಲವರು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ ನೆಪ ಮಾತ್ರಕ್ಕೆ ನಾಯಕ, ಈಗಲೂ ಬೌಲರ್ ಗಳ ಜುಟ್ಟು ಧೋನಿ ಕೈಯಲ್ಲಿ?!