ಮೈಸೂರು: ಕರ್ನಾಟಕದ ಹೆಮ್ಮೆಯ ಕೆಆರ್ ಎಸ್ ಡ್ಯಾಮ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವ ಮಹದೇವಪ್ಪ ನೀಡಿರುವ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ. ಇದೀಗ ಅಂಕಿ ಅಂಶ ಏನು ಹೇಳುತ್ತದೆ ನೋಡೋಣ.
ಕೆಆರ್ ಎಸ್ ಡ್ಯಾಮ್ ನಿರ್ಮಾಣ ಮಾಡಿದ್ದು ಮೈಸೂರು ರಾಜವಂಶಸ್ಥರು. ಅದರಿಂದಾಗಿ ಇಂದಿಗೂ ಮೈಸೂರು, ಮಂಡ್ಯ, ಬೆಂಗಳೂರಿನ ಜನರ ಕುಡಿಯುವ ನೀರಿನ ಸಮಸ್ಯೆ, ಕೃಷಿಕರ ಸಮಸ್ಯೆ ನಿವಾರಣೆಯಾಗಿದೆ. ಇಂದಿಗೂ ಜನ ಈ ವಿಚಾರದಲ್ಲಿ ಮೈಸೂರು ರಾಜವಂಶಸ್ಥರನ್ನು ಸ್ಮರಿಸಿಕೊಳ್ಳುತ್ತಾರೆ.
ಆದರೆ ಸಚಿವ ಮಹದೇವಪ್ಪ ಕೆಆರ್ ಎಸ್ ಡ್ಯಾಮ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್. ಈಗಲೂ ಅದರ ಕುರುಹುಗಳಿವೆ ಎಂದು ಹೇಳಿಕೊಂಡಿದ್ದರು. ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಅಂಕಿ ಅಂಶ ಗಮನಿಸಿದರೆ ಕೆಆರ್ ಎಸ್ ಡ್ಯಾಮ್ ನಿರ್ಮಾಣ ಆರಂಭವಾಗಿದ್ದು 1911 ರಲ್ಲಿ. ಟಿಪ್ಪು ಸುಲಸ್ತಾನ್ ತೀರಿಕೊಂಡಿದ್ದು 1799 ರಲ್ಲಿ. ಅಂದರೆ ಟಿಪ್ಪು ನಿಧನವಾಗಿ 112 ವರ್ಷದ ಬಳಿಕ ಕೆಆರ್ ಎಸ್ ಡ್ಯಾಮ್ ನಿರ್ಮಾಣ ಆರಂಭವಾಗಿದ್ದು. ಹೀಗಾಗಿ ಮಹದೇವಪ್ಪಗೆ ಈ ಅಂಕಿ ಅಂಶ ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಝಾಡಿಸಿದ್ದಾರೆ. ಟಿಪ್ಪು ಸುಲ್ತಾನ್ ಮೇಲಿನ ಪ್ರೇಮದಿಂದ ಮೈಸೂರು ರಾಜರ ಕೊಡುಗೆಯನ್ನೇ ಕಡೆಗಣಿಸುತ್ತಿದ್ದಾರೆ. ಸ್ವಲ್ಪವಾದರೂ ತಿಳಿದುಕೊಂಡು ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.