Select Your Language

Notifications

webdunia
webdunia
webdunia
webdunia

ಕೊರೊನಾ ನೆಗವಿಟ್ ಇದ್ರೂ 28 ದಿನ ಕ್ವಾರಂಟೈನ್ ಕಡ್ಡಾಯ ಸಚಿವ

ಕೊರೊನಾ ನೆಗವಿಟ್ ಇದ್ರೂ 28 ದಿನ ಕ್ವಾರಂಟೈನ್ ಕಡ್ಡಾಯ ಸಚಿವ
ತುಮಕೂರು , ಶನಿವಾರ, 4 ಏಪ್ರಿಲ್ 2020 (20:01 IST)
ಕೊರೋನಾ ವೈರಸ್ ಕೋವಿಡ್ 19 ಹರಡದಂತೆ ತಡೆಯಲು ಬಿಗಿ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.

ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರನ್ನು (ಪ್ರೈಮರಿ ಅಂಡ್ ಸೆಕೆಂಡರಿ ಕಾಂಟ್ಯಾಕ್ಟ್) ಸಂಪೂರ್ಣವಾಗಿ ಪತ್ತೆಹಚ್ಚಿ ಅವರನ್ನು ಕ್ವಾರಂಟೈನ್ ಮಾಡಿ, ಅವರ ಮೇಲೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದ್ದಾರೆ.

ಕೋವಿಡ್ ಸಂಬಂಧಿಸಿದವರನ್ನು ತಾಲ್ಲೂಕು ಆಸ್ಪತ್ರೆ ಅಥವಾ ತಾಲ್ಲೂಕು ಕೇಂದ್ರಗಳಲ್ಲಿ ಇಟ್ಟು ನಿಗಾವಹಿಸುವ ಬದಲು ಎಲ್ಲರನ್ನು ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಿ, ಅಲ್ಲಿಯೇ ಚಿಕಿತ್ಸೆ/ ನಿಗಾವಹಿಸಲು ಸುಲಭವಾಗುತ್ತದೆ.  ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ನಿರ್ವಹಣೆಗೆ ಅನುಕೂಲವಾಗಲಿದೆ. ಶಂಕಿತರಿಗೆ ನೆಗೆಟಿವ್ ವರದಿ ಬಂದಿದ್ದರೂ ಕಡ್ಡಾಯವಾಗಿ 28 ದಿನಗಳ ಕಾಲ ಅವರನ್ನು ನಿಗಾವಣೆಯಲ್ಲಿಡಬೇಕು ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿಜಾಮುದ್ದೀನ್ ಮಸೀದಿ ಮುಸ್ಲಿಂ ಗುರುಗಳಿಂದ ರಾಜ್ಯದಲ್ಲಿ ಪ್ರಚಾರ : ಲಾಕ್ ಡೌನ್ ಬಿಗಿ