Publish Date: Tue, 18 Aug 2020 (18:47 IST)
Updated Date: Tue, 18 Aug 2020 (18:48 IST)
ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಸಚಿವರೊಬ್ಬರು ಆಗ್ರಹ ಮಾಡಿದ್ದಾರೆ.
ಎಸ್ ಡಿ ಪಿ ಐ ಹಾಗೂ ಪಿಎಫ್ ಎ ಸಂಘಟನೆಗಳನ್ನು ನಿಷೇಧಿಸಲು ಬೆಂಬಲ ವ್ಯಕ್ತಪಡಿಸುವುದಾಗಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಆ. 20 ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಅಂದಿನ ಸಭೆಯಲ್ಲಿ ಬೆಂಗಳೂರು ಗಲಭೆ ಹಾಗೂ ಸಂಘಟನೆಗಳ ನಿಷೇಧದ ಬಗ್ಗೆ ಚರ್ಚೆಯಾದರೆ ತಾವು ಗಲಭೆಗೆ ಕಾರಣವಾದ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯ ಮಾಡುವುದಾಗಿ ಹೇಳಿದ್ದಾರೆ.