Publish Date: Fri, 14 Aug 2020 (17:47 IST)
Updated Date: Fri, 14 Aug 2020 (17:50 IST)
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಭಯೋತ್ಪಾದನೆಗೆ ನಿಕಟ ಸಂಪರ್ಕವಿದೆ,
ಹೀಗಂತ ಸಚಿವ ಸಿ.ಸಿ.ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಗಲಭೆ ಪ್ರಕರಣ ಕುರಿತಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಗಲಭೆ ಪೂರ್ವ ನಿಯೋಜಿತ ಸಂಚು. ಕೇವಲ ಒಂದು ವಾಟ್ಸಾಪ್ ಮೆಸೇಜ್ ಗೆ ಸಾಕಷ್ಟು ಜನರು ಸೇರೋದು ಅಸಾಧ್ಯ ಎಂದರು.
ಇದೊಂದು ಪೂರ್ವ ನಿಯೋಜಿತ ಸಂಚು. ಇಷ್ಟೆಲ್ಲಾ ಗಲಾಟೆ, ಹಿಂಸಾಚಾರ ನಡೆದರೂ ಕಾಂಗ್ರೆಸ್ ಪಕ್ಷ ಖಂಡಿಸುತ್ತಿಲ್ಲಾ. ಹಿಂದಿನ ಕಾಂಗ್ರೆಸ್ ಸರ್ಕಾರ ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ಸಂಘಟನೆ ಮೇಲೆ ಪ್ರಕರಣ ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದರು.