Select Your Language

Notifications

webdunia
webdunia
webdunia
webdunia

ಆಸ್ಪತ್ರೆಯಲ್ಲಿರುವ ಪ್ರಣಬ್ ಮುಖರ್ಜಿಗೆ ಹಲಸಿನ ಹಣ್ಣು ತಿನ್ನುವ ಆಸೆಯಾಗಿತ್ತಂತೆ!

ಪ್ರಣಬ್ ಮುಖರ್ಜಿ
ನವದೆಹಲಿ , ಶುಕ್ರವಾರ, 14 ಆಗಸ್ಟ್ 2020 (12:18 IST)
ನವದೆಹಲಿ: ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾಗಿ ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಹಲಸಿನ ಹಣ್ಣು ತಿನ್ನುವ ಆಸೆಯಾಗಿತ್ತಂತೆ! ಆಸ್ಪತ್ರೆಗೆ ದಾಖಲಾಗುವ ಒಂದು ವಾರ ಮೊದಲು ಅವರು ಪುತ್ರನ ಬಳಿ ತಮ್ಮ ಆಸೆ ಹೇಳಿಕೊಂಡಿದ್ದರಂತೆ.


ಸದ್ಯಕ್ಕೆ ಪ್ರಣಬ್ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ. ಆದರೆ ಶಸ್ತ್ರಚಿಕಿತ್ಸೆಗೊಳಗಾಗುವ ಒಂದು ವಾರ ಮೊದಲು ಪುತ್ರ ಅಭಿಜಿತ್ ನನ್ನು ಕರೆದು ತಮ್ಮ ಹಳ್ಳಿಯಿಂದ ಹಲಸಿನ ಹಣ್ಣು ತರಿಸಿಕೊಡು ಎಂದು ಕೇಳಿಕೊಂಡಿದ್ದರಂತೆ. ಹಾಗಂತ ಸ್ವತಃ ಅಭಿಜಿತ್ ಆಂಗ್ಲ ಮಾಧ್ಯಮವೊಂದರ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಅಂತೂ ಆವತ್ತು ಅಭಿಜಿತ್ ಹೇಗಾದರೂ ಮಾಡಿ ಪ್ರಣಬ್ ತವರು ಮಿರಾಟಿಯಿಂದ ಹಲಸಿನ ಹಣ್ಣು ತರಿಸಿ ತಂದೆಗೆ ನೀಡಿದ್ದರಂತೆ. ಆವತ್ತು ಖುಷಿಯಿಂದ ಹಲಸಿನ ಹಣ್ಣು ಸೇವಿಸಿದ್ದ ಪ್ರಣಬ್ ಗೆ ಅದೃಷ್ಟವಶಾತ್ ರಕ್ತದೊತ್ತಡ ಹೆಚ್ಚಾಗಲಿಲ್ಲ ಎಂದು ಅಭಿಜಿತ್ ನೆನೆಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

SDPI ಬ್ಯಾನ್ ಗೆ ನಾನೂ ಬೆಂಬಲಿಸುವೆ ಎಂದ ಸಚಿವ