Select Your Language

Notifications

webdunia
webdunia
webdunia
Thursday, 3 April 2025
webdunia

ವಯನಾಡು ದುರಂತದಲ್ಲಿ ಸಾವನ್ನಪ್ಪಿದ ಅಜ್ಜಿ ಮೊಮ್ಮಗನ ಮಂಡ್ಯದ ಮನೆಗೆ ಸಚಿವ ಚಲುವರಾಯಸ್ವಾಮಿ ಭೇಟಿ

Wayanad LandSlide

Sampriya

ಮಂಡ್ಯ , ಶುಕ್ರವಾರ, 2 ಆಗಸ್ಟ್ 2024 (16:01 IST)
Photo Courtesy X
ಮಂಡ್ಯ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟ ಮಂಡ್ಯದ ಅಜ್ಜಿ ಮೊಮ್ಮಗ  ನಿಹಾಲ್ ಹಾಗೂ ಲೀಲಾವತಿ ಅವರ ಮನೆಗೆ ಸಚಿವ ಎನ್ ಚಲುವರಾಯಸ್ವಾಮಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ಸರ್ಕಾರದಿಂದ 5 ಲಕ್ಷ ಪರಿಹಾರವನ್ನು ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದರು.  ನಿಹಾಲ್ ಅವರು ಚಿಕ್ಕ‌ ವಯಸ್ಸಿನ ಹುಡುಗನಾಗಿದ್ದು, ಆವರಿಗೂ ಸಹ ಸಣ್ಣ ಪ್ರಮಾಣದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು. ಈ ವೇಳೆ ಅಂತ್ಯಕ್ರಿಯೆ ಹಾಗೂ ಕುಟುಂಬಕ್ಕೆ ಏನಾದರೂ ಸಹಾಯವಾಗಲಿ ಎಂದು ವೈಯಕ್ತಿಕವಾಗಿ ಪರಿಹಾರ ನೀಡಿದರು.

ಇನ್ನೂ ದುರಂತದಲ್ಲಿ ಇದೇ ಕುಟುಂಬದ ಮೂವರು ವಯನಾಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಕರ್ನಾಟಕ ಸರ್ಕಾರದಿಂದ ಒದಗಿಸುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಯನಾಡು ದುರಂತ: 150 ಕುಟುಂಬಕ್ಕೆ ನಾವೇ ಮನೆ ನಿರ್ಮಿಸುತ್ತೇವೆಂದ ಎನ್‌ಎಸ್‌ಎಸ್‌