Select Your Language

Notifications

webdunia
webdunia
webdunia
webdunia

ವಿದ್ಯುತ್ ಮೀಟರ್ ಹಾಕಲು ಬಂದವ ಬಾಲಕಿಗೆ ಹೀಗಾ ಮಾಡೋದು?

ನವದೆಹಲಿ
ನವದೆಹಲಿ : ಮನೆಗೆ ವಿದ್ಯುತ್ ಮೀಟರ್ ಹಾಕಲು ಬಂದ 32 ವರ್ಷದ ವ್ಯಕ್ತಿಯೊಬ್ಬ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಆರೋಪಿ ರಾಜು ಶ್ರೀವಾಸ್ತವ ಎಂಬುದಾಗಿ ತಿಳಿದುಬಂದಿದೆ. ಈತ ಸಗ್ಸ್ ಲಾಯ್ಡ್ ಎನರ್ಜಿ ಪ್ರೈ.ಲಿ.ನಲ್ಲಿ  ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಬಾಲಕಿಯ ಮನೆಗೆ ಮಿದ್ಯುತ್ ಮೀಟರ್ ಹಾಕಲು ಬಂದಾಗ ಮನೆಯ ಹೊರಗೆ ನಿಂತಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಬಾಲಕಿ ಈ ಬಗ್ಗೆ ತಾಯಿಗೆ ತಿಳಿಸಿದಾಗ, ತಾಯಿ ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮುಲು- ಸುಧಾಕರ್ ನಡುವಿನ ಸಂಧಾನ ಸಫಲ