Select Your Language

Notifications

webdunia
webdunia
webdunia
webdunia

ಮೇಕೆದಾಟು ಪಾದಯಾತ್ರೆ ಬಲು ಜೋರು

ಮೇಕೆದಾಟು ಪಾದಯಾತ್ರೆ ಬಲು ಜೋರು
ಬೆಂಗಳೂರು , ಗುರುವಾರ, 3 ಮಾರ್ಚ್ 2022 (14:28 IST)
ಮಾರ್ಚ್ 3 ಮತ್ತೊಂದು ಇತಿಹಾಸ ಸೃಷ್ಟಿಯಾಗುವ ಸಮಯ. ಈ ಅಮೋಘ ಘಳಿಗೆಗೆ ನೀವು ಸಾಕ್ಷಿಯಾಗಬೇಕು ಎಂದು ಮೇಕೆದಾಟು ಪಾದಯಾತ್ರೆಯಲ್ಲಿ ನಿರತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ಕರೆ ಕೊಟ್ಟಿದ್ದಾರೆ. ಮೂರನೇ ತಾರೀಕು ಪಾದಯಾತ್ರೆ ಅಂತ್ಯ ಮಾಡಲಿದ್ದೇವೆ.
ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರಿಗೆ ಮುಖಂಡರಿಗೆ ಮನವಿ ಮಾಡುತ್ತೇನೆ. ನೀವು ಮೂರನೇ ತಾರೀಖು ಬೆಳಗ್ಗೆ ಪ್ಯಾಲೆಸ್ಗೆ ಬಂದು ಅಲ್ಲಿಂದ ಪ್ಯಾಲೆಸ್ ನಿಂದ ಪಾದಯಾತ್ರೆಗೆ ಹೆಜ್ಜೆ ಹಾಕಬೇಕು. ಇದು ನಿಮಗೆ ಅನುಭವದ ಪಾಠ ನೀಡಲಿದೆ ಎಂದು ಕರುನಾಡಿಗೆ ಡಿಕೆ ಶಿವಕುಮಾರ್ ಕರೆ ನೀಡಿರುವ ವಿಡಿಯೋವನ್ನು ಕೂ ಮಾಡಲಾಗಿದೆ.
 
ವಿಡಿಯೋದಲ್ಲಿ ಡಿಕೆ ಶಿವಕುಮಾರ್, ಇದು ಒಂದು ಸಂಘಟನೆಗೆ ಮತ್ತು ಇತಿಹಾಸ ಪುಟಕ್ಕೆ ಎರಡಕ್ಕೂ ಸೇರುವ ಅವಕಾಶ ಇದೆ. ರಾಜ್ಯದ ಮೂಲೆ ಮೂಲೆಯಿಂದ ಸಂಘಟರು ಬನ್ನಿ. ಆರು ಕಿಲೋ ಮೀಟರ್ ಆದಮೇಲೆ ನ್ಯಾಷನಲ್ ಕಾಲೇಜಿಗೆ ಹೋಗುತ್ತೇವೆ. ನಾವು ನೀರಿಗಾಗಿ ನಡೆಯೋಣ. ಬನ್ನಿ ಹೆಜ್ಜೆ ಹಾಕಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
 
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಎರಡನೇ ದಿನದ ಪಾದಯಾತ್ರೆ ಆರಂಭಗೊಂಡಿದೆ. ಬಿಟಿಎಂ ಲೇಔಟ್ ಕ್ಷೇತ್ರದಿಂದ ಪಾದಯಾತ್ರೆ ಆರಂಭಗೊಂಡಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಮುಖಂಡರು ಭಾಗಿಯಾಗಿದ್ದಾರೆ. ಪಾದಯಾತ್ರೆಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುರುವಾರದ ಪಾದಯಾತ್ರೆ ಇತಿಹಾಸ ಸೃಷ್ಟಿಸಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಯುದ್ಧ ನಿಲ್ಲಿಸಿ ಎಂದು ಪುಟಿನ್‌ಗೆ ನಾವು ಹೇಳಬಹುದೇ : ಸಿಜೆಐ