Select Your Language

Notifications

webdunia
webdunia
webdunia
webdunia

ಡಿಕೆಶಿ ಉಪಹಾರ ಸಭೆಗೆ ಸಿದ್ದುಗೆ ಆಹ್ವಾನವಿಲ್ಲ?

ಡಿಕೆಶಿ ಉಪಹಾರ ಸಭೆಗೆ ಸಿದ್ದುಗೆ ಆಹ್ವಾನವಿಲ್ಲ?
ಬೆಂಗಳೂರು , ಗುರುವಾರ, 4 ಅಕ್ಟೋಬರ್ 2018 (16:05 IST)
ರಾಜ್ಯದ ಕಾಂಗ್ರೆಸ್ ನಲ್ಲಿ ಮತ್ತೊಂದು ರಾಜಕೀಯ ಬೆಳವಣಿಗೆ ಶುರುವಾಗಿದೆ. ಪ್ರಮುಖ ಮುಖಂಡನ ಮನೆಯಲ್ಲಿ ಸಚಿವರು ಉಪಹಾರ ಸೇವಿಸಿ ಸಭೆ ನಡೆಸಿರುವುದು ಮಹತ್ವದ ತಿರುವು ಪಡೆದುಕೊಂಡಿದೆ.

ಕಾಂಗ್ರೆಸ್ – ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದೂರವಿಟ್ಟು, ರಾಜ್ಯದ ಕಾಂಗ್ರೆಸ್ ಸಚಿವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕಾಲ ಸಮೀಪವಾಗಿರುವಾಗಲೇ ಡಿ.ಕೆ.ಶಿವಕುಮಾರ್ ರ ನಿವಾಸದಲ್ಲಿ ಉಪಹಾರಕ್ಕೆ ಆಗಮಿಸಿದ ಸಚಿವರು, ಮಹತ್ವದ ಚರ್ಚೆ ನಡೆಸಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಸಿದ್ದರಾಮಯ್ಯನವರ ಪ್ರಭಾವ ದೆಹಲಿ ಮಟ್ಟದಲ್ಲಿ ಕುಗ್ಗಿಸಲು ಹಾಗೂ ಕೇಂದ್ರ ಸರಕಾರ ಇಡಿ ಬಳಸಿ ಹಣಿಯಲು ನಡೆಸಿರುವ ಯತ್ನಕ್ಕೆ ಉತ್ತರ ನೀಡುವಂತೆ ಬಲ ಪ್ರದರ್ಶನಕ್ಕಾಗಿ ಉಪಹಾರ ಕೂಟ ನಡೆದಿದೆ ಎಂದೂ ವಿಶ್ಲೇಷಣೆ ಮಾಡಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹುಲಿ ಚರ್ಮ ಮಾರಾಟಕ್ಕೆ ಯತ್ನಿಸಿದವನ ಬಂಧನ