Select Your Language

Notifications

webdunia
webdunia
webdunia
webdunia

ಬಿಸಿಲೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್: ಏಕೆ ಗೊತ್ತಾ?

ಬಿಸಿಲೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್: ಏಕೆ ಗೊತ್ತಾ?
ಕಲಬುರಗಿ , ಮಂಗಳವಾರ, 27 ನವೆಂಬರ್ 2018 (15:28 IST)
ಕೇಂದ್ರ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಸಿಎ) ಸದಸ್ಯರ ಭೇಟಿ ಹಿನ್ನೆಲೆಯಲ್ಲಿ ಬಿಸಿಲೂರಿನಲ್ಲಿ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಕೇಂದ್ರ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಸಿಎ) ಸದಸ್ಯರು ಕಲಬುರಗಿ ಹೊರವಲಯದ ಕರ್ನಾಟಕ ಕೇಂದ್ರೀಯ ವಿ.ವಿ. ಮತ್ತಿತರ ಕಡೆ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡಯಲಿರುವ ಸಮಿತಿ ಸಭೆ ಹಿನ್ನೆಲೆಯಲ್ಲಿ ಭಾರಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪಿಸಿಎ ಸಮಿತಿಯ ಅಧ್ಯಕ್ಷರಾಗಿರಾಗಿರುವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 15 ಲೋಕಸಭೆ ಮತ್ತು 7 ರಾಜ್ಯಸಭೆ ಸದಸ್ಯರನ್ನೊಳಗೊಂಡ ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಪ್ರಥಮ ಬಾರಿಗೆ ಕಲಬುರ್ಗಿಯಲ್ಲಿ ನಡೆಯುತ್ತಿರುವ ಸಮಿತಿ ಸಭೆ ಇದಾಗಿದ್ದರಿಂದ, ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ.  ಸಂಸತ್ ಅನುಮೋದಿಸುವ ಅನುದಾನಗಳು ಮತ್ತು ಖರ್ಚು ವೆಚ್ಚಗಳ ಲೆಕ್ಕ ಪತ್ರ ಪರಿಶೀಲನೆ ಜವಾಬ್ದಾರಿ ಹೊತ್ತಿರುವ ಸಮಿತಿ ಇದಾಗಿದೆ.

ಕರ್ನಾಟಕ ಕೇಂದ್ರೀಯ ವಿ.ವಿ. ಜೊತೆ ಇ.ಎಸ್.ಐ. ಆಸ್ಪತ್ರೆ, ರೈಲ್ವೆ ನಿಲ್ದಾಣಕ್ಕೂ ಭೇಟಿ ನೀಡಲಿರುವ ಸಮಿತಿ ಸದಸ್ಯರ ಭದ್ರತೆಗಾಗಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬರ ಪರಿಸ್ಥಿತಿ: ಜಿಲ್ಲಾಧಿಕಾರಿಗಳ ಜತೆ ಸಿಎಂ ಸಭೆ